Breaking News

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೇಟೆಗಾರನಿಗೆ ಗುಂಡೇಟು

Spread the love

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ  ಕಾಡುಹಂದಿಗಳನ್ನು ಬೇಟೆಯಾಡಿ ಕೊಂಡೊಯ್ಯತ್ತಿದ್ದ ಆರೋಪಿಗೆ ಅರಣ್ಯ ಇಲಾಖೆ  ಸಿಬ್ಬಂದಿ ಗುಂಡೇಟು ನೀಡಿ ಬಂಧಿಸಿದ್ದಾರೆ.

ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆಯ ಕಾಥೇರಿ ಗ್ರಾಮದ ಅನ್ವಿತ್ ಬಂಧಿತ ಆರೋಪಿ. ಈತನ ಜೊತೆಗೆ ಬಂದಿದ್ದ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರ್ಶನ್, ಮಂಜು ಮತ್ತು ಕಿರಣ್ ಪರಾರಿಯಾದ ಆರೋಪಿಗಳು.

ಅರಣ್ಯ ಸಿಬ್ಬಂದಿ ಕಾರು ಅಡ್ಡಗಟ್ಟಿ ತಪಾಸಣೆ ನಡೆಸುವ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಕಾರು ಅಡ್ಡಗಟ್ಟುತ್ತಿದ್ದಂತೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಓರ್ವನಿಗೆ ಗುಂಡೇಟು ನೀಡಿ ಬಂಧಿಸಲಾಗಿದೆ. ಪರಾರಿಯಾದವರಿಗಾಗಿ ಶೋಧ ನಡೆಯುತ್ತಿದೆ.

ದಾಳಿ ವೇಳೆ ಎರಡು ಕಾಡುಹಂದಿ, ಒಂದು ಮಚ್ಚು, ಎರಡು ಟಾರ್ಚ್, ಒಂದು ಟಾರ್ಪಲ್, ಒಂದು ಮೊಬೈಲ್ ಹಾಗೂ ಆಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿದೆ.


Spread the love

About Laxminews 24x7

Check Also

ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಆಗಲ್ಲ: ಬೇಳೂರು ಗೋಪಾಲಕೃಷ್ಣ

Spread the loveಬೆಂಗಳೂರು: ಸಿದ್ದರಾಮಯ್ಯ  ಅವರು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಹೇಳಿದ್ದಾರೆ. ಆದರೆ ರಾಜಕೀಯ ನಿವೃತ್ತಿ ಆಗಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ