Breaking News

ಪತ್ನಿ ಅಗಲಿಕೆ ನೋವಲ್ಲಿ ರಾತ್ರಿಯಿಡೀ ಕಣ್ಣೀರಿಟ್ಟು ಪತಿ ಸಾವು

Spread the love

ಹಾವೇರಿ: 45 ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದ ದಂಪತಿ  ಸಾವಿನಲ್ಲಿಯೂ ಒಂದಾಗಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಾಂತಮ್ಮ ರಾತ್ರಿ ಸುಮಾರು 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಕ್ಕೊಳಗಾದ 70 ವರ್ಷದ ಜುಂಜಪ್ಪ ಬಾರ್ಕಿ ಹೆಂಡತಿ ಇಲ್ಲದೆ ಹೇಗೆ ಬದುಕಲಿ ಎಂದು ರಾತ್ರಿ ಪೂರ್ತಿ ಕಣ್ಣೀರು ಹಾಕುತ್ತ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಪತ್ನಿಯ ಸಾವಿನ ನೋವನ್ನು ತಡೆಯಲಾರದೆ ಇಂದು ಬೆಳಗಿನ ಜಾವ ಜುಂಜಪ್ಪ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಂಡ್ಯ | ಹೆದ್ದಾರಿಗೆ ಉರುಳಿ ಬಿದ್ದ ಬಾಯ್ಲರ್ ಟ್ಯಾಂಕ್; ತಪ್ಪಿದ ಅನಾಹುತ ಪತ್ನಿಯ ನಿಧನದ ಕೆಲವೇ ಗಂಟೆಗಳ ಅಂತರದಲ್ಲಿ ಪತಿಯೂ ನಿಧನರಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಸುಮಾರು 45 ವರ್ಷಗಳಿಂದ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದ್ದ ಈ ದಂಪತಿಯ ಸಾವಿನ ಸುದ್ದಿ, ಜೀವನದಲ್ಲಿ ಮಾತ್ರವಲ್ಲ, ಸಾವಿನಲ್ಲಿಯೂ ಒಂದಾದ ಈ ಜೋಡಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಸಾವಿನಲ್ಲಿಯೂ ಒಂದಾದ ಈ ದಂಪತಿಯ ಪ್ರೀತಿ ಮತ್ತು ಬಾಂಧವ್ಯ ಹೆಸರೂರು ಗ್ರಾಮಸ್ಥರ ಮನಸ್ಸನ್ನು ಭಾವುಕಗೊಳಿಸಿದ್ದು, ಅಂತಿಮ ಯಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.


Spread the love

About Laxminews 24x7

Check Also

ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಆಗಲ್ಲ: ಬೇಳೂರು ಗೋಪಾಲಕೃಷ್ಣ

Spread the loveಬೆಂಗಳೂರು: ಸಿದ್ದರಾಮಯ್ಯ  ಅವರು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಹೇಳಿದ್ದಾರೆ. ಆದರೆ ರಾಜಕೀಯ ನಿವೃತ್ತಿ ಆಗಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ