ಶಿವಮೊಗ್ಗ: ಕ್ರಷರ್ ಉದ್ಯಮಿಯೊಬ್ಬರು ನಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್ (42) ಆತ್ಮಹತ್ಯೆಗೆ ಶರಣಾದ ಉದ್ಯಮಿ. ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡು ಅಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ಉದ್ಯಮದಲ್ಲಿ ಉಂಟಾಗಿದ್ದ ನಷ್ಟ ಹಾಗೂ ವಿಪರೀತ ಸಾಲದ ಹೊರೆಯಿಂದಾಗಿ ಅವರು ಮನನೊಂದಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Laxmi News 24×7