Breaking News

ಅರಣ್ಯ ಇಲಾಖೆಯಿಂದ ಶಾಕ್ – ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ರೇಟ್ ಡಬಲ್

Spread the love

ಚಾಮರಾಜನಗರ: ಅರಣ್ಯ ಇಲಾಖೆಯು ಸಫಾರಿ ಮಾಡೋರಿಗೆ ಶಾಕ್ ನೀಡಿದ್ದು, ಪ್ರಸಿದ್ಧ ಬಂಡೀಪುರ, ನಾಗರಹೊಳೆಯಲ್ಲಿ  ಸಫಾರಿ ದರವನ್ನು  ಬಹುತೇಕ ಡಬಲ್ ಮಾಡಲಾಗಿದೆ.

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸೆಪ್ಟೆಂಬರ್ 1ರಿಂದ ಪರಿಷ್ಕತ ಸಫಾರಿ ದರ ಜಾರಿಯಾಗಲಿದೆ. ಬಸ್, ಜೀಪ್, ಕ್ಯಾಮೆರಾ ಬಳಕೆ ಶುಲ್ಕ, ವಾಹನ ಪಾರ್ಕಿಂಗ್ ಸೇರಿದಂತೆ ಎಲ್ಲವನ್ನೂ ಬಹುತೇಕ ದ್ವಿಗುಣಗೊಳಿಸಿದ್ದಾರೆ.

ಬಂಡೀಪುರದಲ್ಲಿ ಬಸ್ ಸಫಾರಿಗೆ ವಯಸ್ಕರ ದರವನ್ನು 650 ರೂ.ಯಿಂದ 1,000 ರೂ.ಗೆ ಏರಿಕೆ ಮಾಡಿದ್ದಾರೆ. ಇನ್ನೂ 12 ವರ್ಷದೊಳಗಿನ ಮಕ್ಕಳಿಗೆ 350 ರೂ.ಯಿಂದ 500 ರೂ.ಗೆ ಹೆಚ್ಚಿಸಿದ್ದಾರೆ. ಜೀಪ್ ಸಫಾರಿಗೆ ವಯಸ್ಕರ ದರ 750 ರೂ.ಯಿಂದ 1,500 ರೂ.ಗೆ ಹಾಗೂ ಮಕ್ಕಳಿಗೆ 750 ರೂ. ನಿಗದಿ ಮಾಡಲಾಗಿದೆ. ಈ ದರಗಳಲ್ಲಿ ನೇಚರ್ ಗೈಡ್ ಶುಲ್ಕ ಸೇರಿರುತ್ತದೆ.

ಇನ್ನೂ ಸಫಾರಿ ವೇಳೆ ಕ್ಯಾಮೆರಾ ಬಳಕೆಗೂ ಹೊಸ ನಿಯಮ ತರಲಾಗಿದ್ದು, 200 ಮಿ.ಮೀ.ವರೆಗೆ ಲೆನ್ಸ್ ಹೊಂದಿರುವ ಕ್ಯಾಮೆರಾಗೆ ಶುಲ್ಕ ಇಲ್ಲ. 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ 1,500 ರೂ. ಜೊತೆಗೆ 18% ಜಿಎಸ್‌ಟಿ ಪಾವತಿಸಬೇಕು. ಬಂಡೀಪುರದಲ್ಲಿ ಸ್ವಂತ ಜೀಪ್, ಎಲ್‌ಸಿವಿ ಅಥವಾ ಬೋಟ್ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿಯಾಗಿದೆ.

ವಯಸ್ಕರಿಗೆ – 600 ರೂ.
ಮಕ್ಕಳಿಗೆ – 300 ರೂ.
ಜೀಪ್ – 2,500 ರೂ.
ಲಘು ವಾಣಿಜ್ಯ ವಾಹನ – 3,500 ರೂ.
ಬೋಟ್ – 3,500 ರೂ.

ನಾಗರಹೊಳೆಯಲ್ಲಿ
ಬಸ್ ಸಫಾರಿ- ವಯಸ್ಕರಿಗೆ 1000 ರೂ. ಮಕ್ಕಳಿಗೆ 500 ರೂ.
ಜೀಪ್ ಸಫಾರಿ- ವಯಸ್ಕರಿಗೆ 1500 ರೂ. ಮಕ್ಕಳಿಗೆ 750 ರೂ.
ಕ್ಯಾಮರಾ- 200 ಎಂಎಂ ಲೆನ್ಸ್‌ಗಿಂತ ಹೆಚ್ಚು 1500 ರೂ.
ವಾಹನ ನಿಲುಗಡೆ- ಕಾರು 100 ರೂ., ಲಘು ವಾಹನ 200 ರೂ., ಬಸ್ 300 ರೂ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ