ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ನೊಂದಣಿ ಸಂಖ್ಯೆ ಹೊಂದಿಲ್ಲದ, ದೋಷಪೂರಿತ ನೊಂದಣಿ ಸಂಖ್ಯೆ ಹೊಂದಿದ ದ್ವಿಚಕ್ರ ವಾಹನ ಬಳಸುತ್ತಿರುವುದನ್ನು ಗಮನಸಿ ನೊಂದಣಿ ಸಂಖ್ಯೆಗಳಿಲ್ಲದ ದ್ವಿಚಕ್ರ ವಾಹನಗಳ ವಿರುದ್ಧ ಬೆಳಗಾವಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ನೊಂದಣಿ ಸಂಖ್ಯೆಗಳಿಲ್ಲದ/ ನೊಂದಣಿ ಸಂಖ್ಯೆ ಮರೆಮಾಚಿದ/ ಮುಂದೆ ಅಥವಾ ಹಿಂದೆ ಯಾವುದಾದರೂ ಒಂದು ನೊಂದಣಿ ಸಂಖ್ಯೆ ಇಲ್ಲದಂತೆ ಮಾಡಿದ ಒಟ್ಟು 105 ದ್ವಿಚಕ್ರ ವಾಹನಗಳನ್ನು ತಡೆಹಿಡಿದು ಅವುಗಳ ದಾಖಲಾತಿಗಳನ್ನು ಪರಿಶೀಲಿಸಿ ದಂಡ ವಿಧಿಸಿ ವಾಹನ ಚಾಲಕರಿಗೆ ತಿಳುವಳಿಕೆಗಳನ್ನು ನೀಡಿ ನೊಂದಣಿ ಸಂಖ್ಯೆಗಳನ್ನು ಅಳವಡಿಸಿದ ನಂತರ ಬಿಡುಗಡೆಗೊಳಿಸಲಾಗಿದೆ.
ಈ ರೀತಿ ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ದೊಷಪೂರಿತ ನೊಂದಣಿ ಸಂಖ್ಯೆ ನೋಂದಣಿ ಸಂಖ್ಯೆ ಹೊಂದಿಲ್ಲದ ಸಂಚರಿಸುವ ವಾಹನ ಸವಾರರ ವಿರುದ್ಧ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮುಂದುರೆಸಿಕೊಂಡು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಕೊಳ್ಳಲಾಗುವುದು. ಕಾರಣ ಎಲ್ಲ ವಾಹನ ಮಾಲೀಕ/ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.
Laxmi News 24×7