Breaking News

CJP ಪ್ರತಿಭಟನೆ: ಮುಂಬೈನಲ್ಲಿ ಪೊಲೀಸ್‌ ವ್ಯಾನ್ ತಡೆದು ನಿಂತ ನಟಿ ರಿಯಾ ಅಹೀರ್

Spread the love

ಮುಂಬೈ: ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಟಿ ರಿಯಾ ಅಹೀರ್ ಪೊಲೀಸ್ ವ್ಯಾನ್ ತಡೆದು ಲ್ಲಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಾದರ್‌ನ ಶಿವಾಜಿ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ನಟಿ ರಿಯಾ ಅಹೀರ್ ಮಳೆಯಲ್ಲೇ ಚಲಿಸುತ್ತಿದ್ದ ಪೊಲೀಸ್ ವ್ಯಾನ್ ತಡೆದು ನಿಂತಿದ್ದಾರೆ. ಇದನ್ನು ಕಂಡು ಸುತ್ತಲಿದ್ದ ಜನರು ನಟಿಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. 

ಮೂಲಗಳ ಪ್ರಕಾರ, ನಟಿಯ ಈ ಹೋರಾಟದ ಫಲವಾಗಿ ಪೊಲೀಸರು ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದರು.

ಬಳಿಕ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ, ನಮ್ಮ ದೇಶದ ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕಾಗುತ್ತದೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ತಪ್ಪು. ಅದಕ್ಕಾಗಿಯೇ ನಾನು ಇಲ್ಲಿ ಬೆಂಬಲವಾಗಿ ನಿಂತಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ದೆಹಲಿಯಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಆಯೋಜಿಸಿದ್ದ ಸಂಸತ್ ಚಲೋ ಪ್ರತಿಭಟನೆಯ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿದರು. 

ಯಾರಿದು ರಿಯಾ ಅಹೀರ್?
ಮೂಲಗಳ ಪ್ರಕಾರ, ರಿಯಾ ಅಹೀರ್ ಓರ್ವ ನಟಿ, ಮಾಡೆಲ್ ಹಾಗೂ ಉದ್ಯಮಿ. ಇತ್ತೀಚೆಗೆ ಬಿಡುಗಡೆಯಾದ ‘ದಿಲ್ಬರಾ’ ಎಂಬ ಸಂಗೀತ ವೀಡಿಯೊದಲ್ಲಿ ನಟಿಸಿದ್ದರು. ಅಲ್ಲದೇ  ‘ರಿಯಾಸತ್’ ಎಂಬ ಹೆಸರಿನ ಸ್ವಂತ ಗಾರ್ಮೆಂಟ್ಸ್ ಬ್ರ್ಯಾಂಡ್ ಹೊಂದಿದ್ದಾರೆ. 

ನಟಿಯ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಹೀರೋ ಎಂದು ಕೊಂಡಾಡುತ್ತಿದ್ದಾರೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ