Breaking News

ಬಿ.ವಿ.ವಿ.ಸಂಘದಲ್ಲಿ ಬಿವಿವಿಎಸ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯದ ಪರಿಶೀಲನಾ ಸಮಿತಿ ಭೇಟಿ

Spread the love

ಬಾಗಲಕೋಟೆ: ನೂತನವಾಗಿ ಆರಂಭಗೊAಡಿರುವ ಬಿವಿವಿ ಸಂಘದ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಮಹಾವಿದ್ಯಾಲಯಕ್ಕೆ ವಿವಿಧ ಕೋರ್ಸುಗಳಿಗೆ ಅನುಮೋದನೆ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪರಿಶೀಲನಾ ಸಮಿತಿಯು ಮಹಾವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿಶೀಲನಾ ಸಮಿತಿಯ ಸದಸ್ಯರು ಪಂ. ಪುಟ್ಟರಾಜ ಗವಾಯಿ ಹಾಗೂ ಹಾನಗಲ್ ಕುಮಾರೇಶ್ವರ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಬಳಿಕ ಮಹಾವಿದ್ಯಾಲಯದ ಮೂಲಸೌಕರ್ಯ, ಗಾಯನ, ತಬಲಾ, ಸಿತಾರ್ ಹಾಗೂ ಭರತನಾಟ್ಯ ವಿಭಾಗಗಳ ತರಗತಿ ಕೊಠಡಿಗಳು, ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗೆ ಅಗತ್ಯವಿರುವ ಸೌಲಭ್ಯಗಳು, ಗ್ರಂಥಾಲಯ, ಆಡಳಿತ ವ್ಯವಸ್ಥೆ ಸೇರಿದಂತೆ ವಿವಿಧ ಶೈಕ್ಷಣಿಕ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ವಿವಿಧ ಕೋರ್ಸುಗಳನ್ನು ಆರಂಭಿಸಲು ಅಗತ್ಯವಿರುವ ಮಾನದಂಡಗಳ ಕುರಿತು ಮಾಹಿತಿ ಪಡೆದು ಸಂಬAಧಿತ ದಾಖಲೆಗಳನ್ನು ಪರಿಶೀಲಿಸಿದ ಸಮಿತಿಯ ಸದಸ್ಯರು, ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿಂದುಸ್ಥಾನಿ ಸಂಗೀತ ವಿಭಾಗದಿಂದ ಆಯೋಜಿಸಲಾಗಿದ್ದ ವಿವಿಧ ಸಂಗೀತ ಕಾರ್ಯಕ್ರಮಗಳು ಹಾಗೂ ಸಾಧನೆಗಳ ದಾಖಲಾತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅನುಮೋದನಾ ಸಮಿತಿಯ ಸದಸ್ಯರುಗಳಾದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ರಾಮಕೃಷ್ಣಯ್ಯ, ತಜ್ಞರಾದ ಡಾ. ಸುಮಿತ್ರಾ ಹಿರೇಮಠ ಅವರನ್ನು ಬಿ.ವಿ.ವಿ.ಸಂಘದಿAದ ಗೌರವಿಸಿ ಸನ್ಮಾನಿಸಲಾಯಿತು.

ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸಂಘದ ಆಡಳಿತ ಸಲಹೆಗಾರ್ತಿ ಡಾ. ಮೀನಾ ಚಂದಾವರಕರ, ಆಡಳಿತಾಧಿಕಾರಿಗಳಾದ ವಿ.ಆರ್. ಶಿರೋಳ ಹಾಗೂ ಡಾ. ವಿ.ಎಸ್. ಕಟಗಿಹಳ್ಳಿಮಠ, ಪದನಿಮಿತ್ಯ ಕಾರ್ಯದರ್ಶಿ ಡಾ. ಎಸ್.ಎಂ. ಗಾಂವ್ಕರ್, ಪ್ರಾಚಾರ್ಯರಾದ ಎಸ್.ಆರ್. ಮೂಗನೂರಮಠ ಮತ್ತು ಜಗನ್ನಾಥ್ ಚವ್ಹಾನ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ಮಹಾವಿದ್ಯಾಲಯದ ನಿರ್ದೇಶಕ ಡಾ. ಆರ್.ಎಂ. ಬೆಣ್ಣೂರ, ಸಂಗೀತ ವಿಭಾಗದ ಮುಖ್ಯಸ್ಥ ಡಾ. ಕೆ.ವಿ. ಮಠ, ವಿಶ್ರಾಂತ ಪ್ರಾಚಾರ್ಯ ಪಂ. ಸಿದ್ದರಾಮಯ್ಯ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

120 ಸ್ಥಾನ ಪಡೆಯೋ ಕಾಲವೂ ಬರುತ್ತೆ, ಅಲ್ಲಿವರೆಗೂ ‌ನಾನೇನು ಸಾಯಲ್ಲ: ಹೆಚ್‌ಡಿಕೆ ತಿರುಗೇಟು

Spread the loveಬೆಂಗಳೂರು: ಜೆಡಿಎಸ್‌ 120 ಸ್ಥಾನ ಪಡೆಯುವ ಕಾಲವೂ ಬರುತ್ತದೆ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ  ಅವರು, ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ