Breaking News

ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರ ಅದ್ಭುತ ಸಾಧನೆ

Spread the love

ಬೆಳಗಾವಿ: ಕಿತ್ತೂರಿನ, ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ಜುಲೈ 6 ರಿಂದ ಜುಲೈ 11, 2026 ರವರೆಗೆ ಹರಿಯಾಣದ ಹಿಸ್ಸಾರ್‌ನ ವಿದ್ಯಾದೇವಿ ಜಿಂದಾಲ್ ಶಾಲೆಯಲ್ಲಿ ಆಯೋಜಿಸಲಾದ ಅಖಿಲ ಭಾರತ ಐಪಿಎಸ್‌ಸಿ ಹಾಕಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 14 ವರ್ಷ, 17 ವರ್ಷ ಮತ್ತು 19 ವರ್ಷ ವಿಭಾಗಕ್ಕೆ ಒಳಪಟ್ಟ ಬಾಲಕಿಯರ ತಂಡಗಳು ಭಾಗವಹಿಸಿದ್ದವು.

ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 15 ಪ್ರತಿಷ್ಠಿತ ಬಾಲಕಿಯರ ಶಾಲೆಗಳು ಭಾಗವಹಿಸಿದ್ದವು. ನಮ್ಮ ಶಾಲೆಯು ವಿಭಾಗದಲ್ಲಿ ರನ್ನರ್ ಆಫ್ ಟ್ರೋಫಿಯನ್ನು ಪಡೆದುಕೊಂಡಿತು. 17 ವರ್ಷ ತಂಡದ ನಾಯಕಿ ಕೆಡೆಟ್ ತನೀಷಾ ಯು ತಂಡವನ್ನು ಮುನ್ನಡೆಸಿದರೆ ಕೆಡೆಟ್ ಅನ್ನಪೂರ್ಣೇಶ್ವರಿ ಪಿ. “ಬೆಸ್ಟ್ ಅಟ್ಯಾಕರ್” ಪ್ರಶಸ್ತಿ ಪಡೆದಳು.

17 ವರ್ಷ ವಿಭಾಗದಲ್ಲಿ ಕೆಡೆಟ್ ಸಂಭ್ರಮಾ ಎಸ್. ಎಂ, ಅನ್ನಪೂರ್ಣೇಶ್ವರಿ ಪಿ., ಪ್ರಜ್ಞಾಪಿ ಮತ್ತು ನಮ್ರತಾ ಎಚ್ ಡಿ ಇವರು ಎಸ್‌ಜಿ ಎಫ್‌ಆಯ್ (SGFI) ಗೆ ಆಯ್ಕೆಯಾಗಿದ್ದಾರೆ. 19 ವರ್ಷ ವಿಭಾಗದಲ್ಲಿ ಕೆಡೆಟ್ ತನೀಷಾ ಯು ಶ್ರಾವಣಿ ಪಿ. ಕೆ, ಸಹನಾ ಕೆ ಮತ್ತು ಲಕ್ಷಣಾ ಎಸ್‌ಎಚ್ ಇವರು ಎಸ್‌ಜಿ ಎಫ್‌ಆಯ್ (SGFI) ಗೆ ಆಯ್ಕೆಯಾಗಿದ್ದಾರೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ