Breaking News

ಇನ್ಮುಂದೆ ಪಿಯುಸಿ ಉಪನ್ಯಾಸಕರು 9, 10ನೇ ತರಗತಿಗೆ ಪಾಠ ಮಾಡೋದು ಕಡ್ಡಾಯ

Spread the love

ಬೆಂಗಳೂರು: ಪಿಯುಸಿ ಉಪನ್ಯಾಸಕರು 9, 10ನೇ ತರಗತಿಗೆ ಕಡ್ಡಾಯವಾಗಿ ಪಾಠ ಮಾಡಬೇಕು ಎಂದು ರಾಜ್ಯ ಸರ್ಕಾರ  ಅಧಿಸೂಚನೆ ಹೊರಡಿಸಿದೆ.

2013ರ ನೇಮಕಾತಿ ನಿಯಮವನ್ನು ಸರ್ಕಾರ ತಿದ್ದುಪಡಿಗೊಳಿಸಿದ್ದು, ಈ ವರ್ಷದಿಂದಲೇ ನಿಯಮ ಜಾರಿಯಾಗಲಿದೆ. ಇದರನ್ವಯ ನೇರ ನೇಮಕಾತಿ ಮತ್ತು ಬಡ್ತಿಯಿಂದ ನೇಮಕವಾದ ಉಪನ್ಯಾಸಕರು 9-10 ನೇ ತರಗತಿಗೆ ಪಾಠ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

ಇನ್ನೂ ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್‌ ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ