ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ತರೀಕೆರೆ ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ.
ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಫಾಲ್ಸ್‌ನ ಜಲವೈಭವ ನೋಡಲು ಪ್ರವಾಸಿಗರ ದಂಡೇ ಬರುತ್ತಿದೆ. ಈ ಜಲಪಾತಕ್ಕೆ ಸ್ಥಳಿಯರು, ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ.
ಕೆಮ್ಮಣ್ಣುಗುಂಡಿ ತಪ್ಪಲಿನ ಕಾಡು ಹಾಗೂ ಕಾಫಿತೋಟಗಳ ಮಧ್ಯೆ ಈ ಜಲಪಾತ ಇದೆ. ಈ ಪರಿಸರದಿಂದ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದೆ. ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಬರುತ್ತಿದೆ.
ಈ ಜಲಪಾತಕ್ಕೆ ಕೆಮ್ಮಣ್ಣುಗುಂಡಿಯಿಂದ ಸುಮಾರು 7 ಕಿ.ಮೀ ಕಾಫಿ ತೋಟದ ಒಳಗೆ ಜೀಪ್‍ನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿಮೀ ಮೀಟರ್ ದೂರದಲ್ಲಿದೆ.
Laxmi News 24×7