ಮಂಡ್ಯ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Rain), ಕೆಆರ್ಎಸ್ ಡ್ಯಾಂಗೆ ಒಂದೇ ದಿನದಲ್ಲಿ 5,000 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ.
ಇಂದು (ಜು.9) 12,694 ಕ್ಯೂಸೆಕ್ ಒಳಹರಿವು ಇದೆ. ಜು.8 ರಂದು 7,531 ಕ್ಯೂಸೆಕ್ ಒಳಹರಿವು ಇತ್ತು. ಭಾರೀ ಮಳೆಯಿಂದ ಒಂದೇ ದಿನದಲ್ಲಿ 5 ಸಾವಿರ ಕ್ಯೂಸೆಕ್ ಏರಿಕೆಯಾಗಿದೆ. ಇದರಿಂದ ನೀರಿನ ಮಟ್ಟ 85.66 ಅಡಿಗೆ ಏರಿಕೆಯಾಗಿದೆ.
ಸದ್ಯ ಡ್ಯಾಂನಲ್ಲಿ 13.512 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ ಒಳಹರಿವು ಹೆಚ್ಚಾದರೆ ಕೆಆರ್ಎಸ್ ಡ್ಯಾಂ ಭರ್ತಿಯಾಗಲಿದೆ.
Laxmi News 24×7