Breaking News

ಅಪ್ರಾಪ್ತರಿಗೆ ಬೈಕ್ ಕೊಟ್ಟವರಿಗೆ ದಂಡ ವಿಧಿಸಿದ ಕೋರ್ಟ್

Spread the love

ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ ಪಾಲಕರಿಗೆ ಪ್ರತ್ಯೇಕ ಪ್ರಕರಣದಲ್ಲಿ ಕಾಗವಾಡ ಹಾಗೂ ನಿಪ್ಪಾಣಿಯ JMFC ನ್ಯಾಯಾಲಯವು  ಭಾರಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಬಳಸುತ್ತಿರುವ ಆಧುನಿಕ ಎ.ಎನ್.ಪಿ.ಆರ್  ತಂತ್ರಜ್ಞಾನವು ಇಂದು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧದ ಕಠಿಣ ಕಾನೂನು ಜಾರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.

ಇತ್ತೀಚೆಗೆ ನಡೆದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣವೊಂದರಲ್ಲಿ, ನಿಪ್ಪಾಣಿ ನಿವಾಸಿಯಾದ ಮನಿಷಾ ಗೋಪಾಲ ಲೋಹಾರ್ ಎಂಬುವವರು ತಮ್ಮ ಮಗ ಇನ್ನು ಅಪ್ರಾಪ್ತನಾಗಿದ್ದಾನೆ (ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸಾಗಿಲ್ಲ) ಎಂದು ತಿಳಿದಿದ್ದರೂ ಸಹ, ಕಾನೂನುಬಾಹಿರವಾಗಿ ಆತನಿಗೆ ದ್ವಿಚಕ್ರ ವಾಹನವನ್ನು ಚಲಾಯಿಸಲು ಕೊಟ್ಟಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ JMFC ನ್ಯಾಯಾಲಯ ನಿಪ್ಪಾಣಿ (cc no 1472/2026), ಆರೋಪಿಗೆ ಭಾರಿ ಮೊತ್ತದ ದಂಡ ವಿಧಿಸಿದೆ.

ಕಾಗವಾಡ ನ್ಯಾಯಾಲಯದಿಂದ ₹25,000. ದಂಡ

ಸಾಕಿನ್ ಮಂಗಸುಳಿ ನಿವಾಸಿ ಮಕ್ರಂದ್ ಮಲ್ಲಪ್ಪ ಮಗದುಮ್ ಅವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ್ದು, ಮಗ ಅಪ್ರಾಪ್ತನೆಂಬುದು ತಿಳಿದಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಕಗವಾಡದ JMFC ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಆರೋಪಿಗೆ ₹25,000 ದಂಡ ವಿಧಿಸಲಾಗಿದೆ.

ನ್ಯಾಯಾಲಯದ ಈ ತೀರ್ಪು ಕೇವಲ ಒಂದು ದಂಡವಲ್ಲ, ಬದಲಾಗಿ ಪೋಷಕರ ಜವಾಬ್ದಾರಿಯ ಬಗ್ಗೆ ನೀಡಿದ ಸ್ಪಷ್ಟ ಸಂದೇಶವಾಗಿದೆ. ಅಪ್ರಾಪ್ತರಿಗೆ ವಾಹನ ನೀಡುವುದು ಕಾನೂನುಬಾಹಿರವಾಗಿದ್ದು, ಇದರಿಂದ ರಸ್ತೆ ಅಪಘಾತಗಳ ಅಪಾಯ ಹೆಚ್ಚುತ್ತದೆ ಎಂಬುದನ್ನು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸಷಪಡಿಸಿದೆ.

ಕೇವಲ ಸಂಚಾರ ನಿಯಮ ಉಲ್ಲಂಘನೆ ಎಂಬ ಸಣ್ಣ ವಿಚಾರವಲ್ಲದೆ, ಸಾರ್ವಜನಿಕರ ಜೀವದ ಸುರಕ್ಷತೆ ಮತ್ತು ಕಾನೂನಿನ ಘನತೆಯನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ನ್ಯಾಯಾಧೀಶರು ಕಠಿಣ ನಿಲುವು ತಾಳಿದ್ದಾರೆ. “ಕಾನೂನು ಯಾರಿಗೂ ಮೀರಿಲ್ಲ” ಎಂಬ ಸಂದೇಶವನ್ನು ಈ ತೀರ್ಪು ಮತ್ತೊಮ್ಮೆ ದೃಢಪಡಿಸಿದೆ.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ