Breaking News

ಶ್ರೀಲಂಕಾ ಜೈಲಿನಲ್ಲಿ ಗ್ಯಾಂಗ್ ವಾರ್ – ಭೀಕರ ಘರ್ಷಣೆಗೆ 25 ಕೈದಿಗಳು ಬಲಿ, 100ಕ್ಕೂ ಹೆಚ್ಚು ಜನರಿಗೆ ಗಾಯ

Spread the love

ಕೊಲಂಬೊ: ಶ್ರೀಲಂಕಾದ ಜೈಲಿನಲ್ಲಿ ಕೈದಿಗಳ ಎರಡು ಗುಂಪಿನ ಮಧ್ಯೆ ಗಲಾಟೆಯಾದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ.

ಕೊಲಂಬೊದ ನೆಗೊಂಬೊ ಜೈಲಿನಲ್ಲಿ ಈ ರಕ್ತಪಾತ ನಡೆದಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳ ನಡುವೆ ಭಾನುವಾರವೇ (ಜು.5) ಈ ಗಲಾಟೆ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕೈದಿಗಳ ನಡುವಿನ ಈ ಮಾರಾಮಾರಿಗೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಅಧಿಕಾರಿಗಳು ಜೈಲಿನ ಆವರಣವನ್ನು ಪರಿಶೀಲಿಸುತ್ತಿದ್ದು, ಮೃತಪಟ್ಟವರು ಮತ್ತು ಗಾಯಗೊಂಡವರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಸ್ಥಳೀಯ ಮಾಧ್ಯಮ ಪ್ರಸಾರ ಮಾಡಿರುವ ದೃಶ್ಯಗಳಲ್ಲಿ, ಜೈಲಿನ ಮುಖ್ಯ ದ್ವಾರದ ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರುವುದು ಕಂಡುಬಂದಿದೆ. ಗಾಯಗೊಂಡ ಕೈದಿಗಳನ್ನು ಪೊಲೀಸ್ ಬಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಬಸ್ಸಿನಲ್ಲಿ ಕೆಳಗೆ ನೆಲದ ಮೇಲೆಯೂ ಕೈದಿಗಳು ರಕ್ತಸಿಕ್ತವಾಗಿ ಬಿದ್ದಿರುವ ದೃಶ್ಯಗಳು ಜೈಲಿನ ಒಳಗಿನ ಭೀಕರತೆಗೆ ಕನ್ನಡಿ ಹಿಡಿದಂತಿವೆ.


Spread the love

About Laxminews 24x7

Check Also

ಪ್ಯಾಕ್‌ ಮಾಡದ ಖಾದ್ಯ ತೈಲ ಮಾರಾಟಕ್ಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ 7 ವರ್ಷ ಜೈಲು

Spread the loveಮುಂಬೈ: ಮಹಾರಾಷ್ಟ್ರದಲ್ಲಿ ಸಡಿಲ (ಪ್ಯಾಕ್ ಮಾಡದ) ಖಾದ್ಯ ತೈಲ ಮಾರಾಟ ಮಾಡುವುದನ್ನು ರಾಜ್ಯ ಆಹಾರ ಮತ್ತು ಔಷಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ