Breaking News

ಟ್ರಯಲ್ ರೂಮ್ ನಲ್ಲಿ ಬಟ್ಟೆ ಚೇಂಜ್ ಮಾಡುವ ಮಹಿಳೆಯರೇ ಎಚ್ಚರ, ರಹಸ್ಯ ವಿಡಿಯೋ ಮಾಡ್ತಾರೆ

Spread the love

ಜುಂಜುನು (ರಾಜಸ್ಥಾನ) – ಇಲ್ಲಿನ ಬಟ್ಟೆ ಅಂಗಡಿಯಲ್ಲಿ ‘ಸೇಲ್ಸ್‌ಮನ್’ ಆಗಿ ಕೆಲಸ ಮಾಡುತ್ತಿದ್ದ ಶಾರುಖ್ ಮನಿಯಾರ್ ಎಂಬಾತ ಅಂಗಡಿಯ ‘ಟ್ರಯಲ್ ರೂಮ್’ನಲ್ಲಿ ಮಹಿಳೆಯರ ರಹಸ್ಯ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಪೊಲೀಸರು ಆರೋಪಿ ಶಾರುಖ್‌ನನ್ನು ಬಂಧಿಸಿದ್ದಾರೆ.

ಜೂನ್ 6 ರಂದು ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಈ ಅಂಗಡಿಗೆ ಹೋಗಿದ್ದರು. ಆಯ್ಕೆ ಮಾಡಿದ ಬಟ್ಟೆಗಳನ್ನು ಧರಿಸಿ ನೋಡಲು ಅವರು ‘ಟ್ರಯಲ್ ರೂಮ್’ಗೆ ಹೋದರು; ಆದರೆ ಶಾರುಖ್ ಮನಿಯಾರ್ ಕೊಠಡಿಯ ಮೇಲ್ಛಾವಣಿಯ ಸಣ್ಣ ರಂಧ್ರದ ಮೂಲಕ ಮೊಬೈಲ್ ಫೋನ್‌ನಲ್ಲಿ ತನ್ನ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ಅವಳು ಗಮನಿಸಿದಳು.
ಆ ಮಹಿಳೆ ಹೊರಬಂದು ತನ್ನ ಪತಿಗೆ ಈ ವಿಷಯ ತಿಳಿಸಿದಳು. ಆಕೆಯ ಪತಿ ಶಾರುಖ್ ವಿಡಿಯೋ ನೋಡುತ್ತಿದ್ದಾಗ ರೆಡ್ ಹ್ಯಾಂಡೆಡ್ ಆಗಿ ಹಿಡಿದರು. ಸಂತ್ರಸ್ತ ಮಹಿಳೆ ತಕ್ಷಣ ಪೊಲೀಸರನ್ನು ಕರೆಸಿದರು.

ಶಾರುಖ್‌ನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಬಟ್ಟೆ ಅಂಗಡಿಗೆ ಭೇಟಿ ನೀಡಿದ ಮಹಿಳೆಯರ ಹಲವು ಆಕ್ಷೇಪಾರ್ಹ ವಿಡಿಯೋಗಳು ಮತ್ತು ಚಿತ್ರಗಳು ಪತ್ತೆಯಾಗಿವೆ.

ಮುಂದಿನ ತನಿಖೆಯಲ್ಲಿ ಶಾರುಖ್ ಮಾತ್ರವಲ್ಲದೆ ಅಂಗಡಿಯ ಮಾಲೀಕರು ಮತ್ತು ಇತರ ಸಿಬ್ಬಂದಿಯೂ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಅಂಗಡಿಯ ಮಾಲೀಕ ಮತ್ತು ಅವನ ಸಹಚರರು ಈ ಅಪರಾಧವನ್ನು ಮುಚ್ಚಿಡಲು ಯತ್ನಿಸಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ನನ್ನ ಮಾನಹಾನಿಯಾಗುವ ಭಯವನ್ನು ತೋರಿಸಿ, ಪೊಲೀಸರಿಗೆ ದೂರು ನೀಡದಿರಲು ಹಣದ ಆಮಿಷವನ್ನೂ ಒಡ್ಡಿದರು; ಆದರೆ ಸಂತ್ರಸ್ತೆ ಪೊಲೀಸರನ್ನು ಕರೆಯಿಸುವ ತನ್ನ ನಿರ್ಧಾರಕ್ಕೆ ಬದ್ಧಳಾಗಿದ್ದು ಪೊಲೀಸರನ್ನು ಕರೆಸಿದಳು.


Spread the love

About Laxminews 24x7

Check Also

ಬೇಕಾಬಿಟ್ಟಿ ಗ್ಯಾರಂಟಿ ಕೊಡೋದ್ರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ ಸೀತಾರಾಮನ್‌

Spread the loveಚಿಕ್ಕಬಳ್ಳಾಪುರ: ಬೇಕಾಬಿಟ್ಟಿ ಗ್ಯಾರಂಟಿಗಳನ್ನ  ಕೊಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ