ಶಿವಮೊಗ್ಗ: ಇಲ್ಲಿನ ರವೀಂದ್ರ ನಗರದ ಮನೆಯೊಂದರಲ್ಲಿ ಮಹಿಳೆ ಮತ್ತು ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಪ್ರಭಾವತಿ (57) ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ವೃದ್ಧೆ ಮೃತಪಟ್ಟಿದ್ದಾರೆ. ಅವರ ಸಾಕು ನಾಯಿ ಕೂಡ ಮನೆಯ ಒಳಗೆ ಸಾವನ್ನಪ್ಪಿದೆ. ಇಂದು ಅಕ್ಕಪಕ್ಕದ ಮನೆಯವರಿಗೆ ವಾಸನೆ ಬಂದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಯನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
Laxmi News 24×7