Breaking News

ಪೋಕ್ಸೊ ಕೇಸ್| ವಚನಾನಂದ ಸ್ವಾಮೀಜಿ ವಿರುದ್ಧ 410 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Spread the love

ದಾವಣಗೆರೆ: ಮಠದಲ್ಲಿದ್ದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಶ್ರೀ ವಿರುದ್ಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 410 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.

ವಚನಾನಂದ ಶ್ರೀ ಹಾಗೂ ಅವರ ಆಪ್ತ ಅಶೋಕ್ ವಿರುದ್ಧ 410 ಪುಟಗಳ ವಿವರವಾದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 63 ಸಾಕ್ಷ್ಯಾಧಾರ, ಒಟ್ಟು ನಾಲ್ವರು ಸಂತ್ರಸ್ತ ಬಾಲಕರು, ಸಂತ್ರಸ್ತ ಬಾಲಕನ ತಾಯಿಯ ಹೇಳಿಕೆ, 2022 ರಿಂದ 2025ರವರೆಗೆ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ, ಶಾಲೆಗೆ ಹೋಗುವ ಮುನ್ನ ಮತ್ತು ಬಂದ ನಂತರ ಲೈಂಗಿಕ ದೌರ್ಜನ್ಯ, ಬೆತ್ತಲಾಗಿ ತಲೆಯಿಂದ ಪಾದದವರೆಗೆ ಬಾಲಕರಿಂದ ಎಣ್ಣೆ ಮಸಾಜ್ ಮಾಡಿಸಿಕೊಂಡಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಲಕರ ಮೇಲೆ ಹಲ್ಲೆ ಮಾಡಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಶ್ರೀಗಳ ವಿರುದ್ಧ ಲೈಂಗಿಕ ದೌಜರ್ನ್ಯದ ಗಂಭೀರ ಆರೋಪ ಮಾಡಲಾಗಿದೆ.

ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ಗೆ ವಚನಾನಂದ ಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದು, ತರಾತುರಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕ ಎ.ಎಂ.ಬಸವರಾಜು ವಾದ ಮಂಡಿಸಿದ್ದು, ಹೈಪ್ರೊಫೈಲ್ ಪ್ರಕರಣ ಹಿನ್ನೆಲೆ ಶೀಘ್ರಗತಿಯಲ್ಲಿ ತನಿಖೆ ಮಾಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಯುವ ಅವಶ್ಯಕತೆಯಿದೆ. ವಚನಾನಂದ ಶ್ರೀ ಇರುವ ಅದೇ ಸ್ಥಳದಲ್ಲಿ ಸಾಕ್ಷ್ಯಕಲೆ ಹಾಕಬೇಕು. ದೂರುದಾರರು, ಸಂತ್ರಸ್ತರು ಕೋರ್ಟ್‌ಗೆ ಹಾಜರಾಗಿದ್ದು, ನಮಗೆ ಜೀವ ಬೆದರಿಕೆ ಇದೆ ಎಂದು ಆಡಿಯೋ ಪೆನ್‌ಡ್ರೈವ್ ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿತ್ತು. ವಚನಾನಂದ ಶ್ರೀ ಎಫ್‌ಐಆರ್ ದಾಖಲಾಗುವ ಮುನ್ನ ನಿರೀಕ್ಷಣಾ ಜಾಮೀನು ಪಡೆದಿದ್ದರು. ಲಕ್ಷ್ಮೇಶ್ವರ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಾಗಿದೆ. ವಚನಾನಂದ ಶ್ರೀ ಅದೇ ಮಠದ ಮಠಾಧೀಶರು, ಪ್ರಭಾವಿಗಳಾದ ಹಿನ್ನೆಲೆ ಭಾಗಶಃ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದಿದ್ದಾರೆ.
ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕನಿಗೆ ವಚನಾನಂದ ಸ್ವಾಮೀಜಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗೂ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವಿದೆ.

ಸಂತ್ರಸ್ತ ಬಾಲಕನ ತಾಯಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳ ಹರಿಹರ ಆಗಿದ್ದರಿಂದ ಈ ಕೇಸ್ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.


Spread the love

About Laxminews 24x7

Check Also

ಮಾವಿನ ಹಣ್ಣು ಸೇವಿಸಿ ಅಸ್ವಸ್ಥ: ಬೀದರ್ ಮೂಲದ ಇಬ್ಬರು ಸಹೋದರಿಯರು ಅನುಮಾನಾಸ್ಪದ ಸಾವು

Spread the loveಬೀದರ್: ಮಾವಿನ ಹಣ್ಣು ಸೇವಿಸಿದ ಬಳಿಕ ಅಸ್ವಸ್ಥಗೊಂಡ ಬೀದರ್ ಮೂಲದ ಇಬ್ಬರು ಸಹೋದರಿಯರು ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ