Breaking News

ಸೌರಶಕ್ತಿ ಉತ್ಪಾದನೆಯಲ್ಲಿ ವಿಶ್ವದ ಎರಡನೆ ದೇಶ ಭಾರತ: ಪ್ರಲ್ಲಾದ ಜೋಶಿ

Spread the love

ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ 2025ರಲ್ಲಿಯೇ ಅಮೆರಿಕಾವನ್ನು  ಹಿಂದಿಕ್ಕಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮನೆ ಮೇಲ್ಛಾವಣಿ ಘಟಕ, ಕೃಷಿ ಪಂಪ್ ಸೌರೀಕರಣದಿಂದ ಹಿಡಿದು ಬೃಹತ್ ಸೌರ ಪಾರ್ಕ್ಗಳ ಸ್ಥಾಪನೆವರೆಗೂ ಭಾರತ ಮುಂಚೂಣಿಯಲ್ಲಿದ್ದು, ವಿಶ್ವದ 2ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಿದೆ. 2025ರ ಸೌರ ಶಕ್ತಿ ಸಾಮರ್ಥ್ಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದ ಅಮೆರಿಕಾವನ್ನು ಮೀರಿಸಿದ್ದು, ವಾರ್ಷಿಕ ಸೇರ್ಪಡೆಯಲ್ಲಿ ಸೌರ ಶಕ್ತಿ ಮಾರುಕಟ್ಟೆಯನ್ನು ವಿಸ್ತೃತವಾಗಿಸಿದೆ.

2025ರಲ್ಲಿ ಭಾರತ 37 GW ಗಿಂತ ಹೆಚ್ಚಿನ ಸೌರಶಕ್ತಿ ಸೇರ್ಪಡೆಯನ್ನು ದಾಖಲಿಸಿದ್ದು, ಇದು ಅಮೆರಿಕಾದ 34 GW ಕ್ಕಿಂತ ಅಧಿಕ ಸಾಮರ್ಥ್ಯವನ್ನು ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿರುವ ಚರಂಕ ಸೌರ ಉದ್ಯಾನ ಭಾರತದ ಸೌರಶಕ್ತಿ ಬೆಳವಣಿಗೆಗೆ ಜಾಗತಿಕ ಮಾನದಂಡ ಸ್ಥಾಪಿಸುತ್ತಿದೆ. ವೇಗವಾಗಿ ಬೆಳೆಯುತ್ತಿರುವ ದೇಶದ ಸೌರಶಕ್ತಿ ಮಾರುಕಟ್ಟೆಗೆ ಪ್ರಮುಖ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತ ಶುದ್ಧ ಇಂಧನ ಪರಿವರ್ತನೆಯಲ್ಲಿ ಹೊಸ ಹೆಜ್ಜೆಯಿರಿಸಿದ್ದು, ಸೌರ ಶಕ್ತಿ, ಪವನ ವಿದ್ಯುತ್, ಜೈವಿಕ ಇಂಧನ ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಮೂಲಕ ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತಿದೆ. ಅಲ್ಲದೆ, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ ಎಂದಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ವರದಿ ಪ್ರಕಾರ, ಅಮೆರಿಕಾವನ್ನು ಹಿಂದಿಕ್ಕಿ ಜಾಗತಿಕವಾಗಿ 2ನೇ ಸ್ಥಾನಕ್ಕೆ ತಲುಪಿದೆ.

ಅಲ್ಲದೇ 2025ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ವರದಿಯಂತೆ 2025-26ರ ಆರ್ಥಿಕ ವರ್ಷದಲ್ಲಿ ಭಾರತ ಒಟ್ಟು 55.3 GW ಪಳೆಯುಳಿಕೆಯೇತರ ಸಾಮರ್ಥ್ಯದ ಸೇರ್ಪಡೆಯನ್ನು ಸಾಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

2025ರ ಜುಲೈನಲ್ಲಿ ಭಾರತ ವಿದ್ಯುತ್ ಉತ್ಪಾದನೆಯಲ್ಲಿ ಇದುವರೆಗಿನ ಅತ್ಯಧಿಕ ನವೀಕರಿಸಬಹುದಾದ ಪಾಲನ್ನು ತಲುಪಿದೆ. ನವೀಕರಿಸಬಹುದಾದ ಇಂಧನ ಮೂಲಗಳು ದೇಶದ ಒಟ್ಟು ವಿದ್ಯುತ್ ಬೇಡಿಕೆಯ 203 GW ನಲ್ಲಿ ಶೇ.51.5ರಷ್ಟು ಪೂರೈಸುತ್ತಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಕೊಲ್ಹಾಪುರದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅಪರೂಪದ 17 ಗಂಟೆಗಳ ‘ಬ್ರೈನ್ ಬೈಪಾಸ್’ ಶಸ್ತ್ರಚಿಕಿತ್ಸೆ ಯಶಸ್ವಿ,ಪ್ರಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ ಮರಜಕ್ಕೆ ಮತ್ತು ತಂಡದ ಐತಿಹಾಸಿಕ ಸಾಧನೆ

Spread the love ಕೊಲ್ಹಾಪುರ:ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಮತ್ತು ಅತ್ಯಂತ ಸಂಕೀರ್ಣವಾದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ