Breaking News

ಪ್ಯಾಸೆಂಜರ್ ಆಟೋಗೆ ಕಾರು ಡಿಕ್ಕಿ – ಐವರು ದುರ್ಮರಣ

Spread the love

ಚಿಕ್ಕಬಳ್ಳಾಪುರ: ಆಟೋಗೆ ಕಾರು ಡಿಕ್ಕಿಯಾದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಬಾಗೇಪಲ್ಲಿ  ತಾಲೂಕಿನ ಸುಂಕಲಮ್ಮ ದೇವಾಲಯದ ಬಳಿ ನಡೆದಿದೆ.

ಮುಂದೆ ಸಾಗುತ್ತಿದ್ದ ಆಟೋಗೆ ಹಿಂಬದಿಯಿಂದ ಥಾರ್ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮುಂದೆ ನಿಂತಿದ್ದ ಲಾರಿ ಆಟೋ ಡಿಕ್ಕಿಯಾಗಿ ಅಪ್ಪಚ್ಚಿಯಾಗಿದೆ. ಅಪಘಾತದಲ್ಲಿ 3-4 ಮಂದಿ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಮೃತಪಟ್ಟವರು: ಆಟೋ ಚಾಲಕ ಅಂಜನಪ್ಪ ಸೇರಿ ವರ್ಷದ ಉಮಾದೇವಿ (55) ವಿಜಯಾ (40) ಲಕ್ಷ್ಮಮ್ಮ (50) ವರ್ಷದ ಸರೋಜಮ್ಮ (35) ಮೃತಪಟ್ಟಿದ್ದಾರೆ.

ಗಂಗಾದೇವಿ, ಲಕ್ಷ್ಮಿದೇವಿ, ರತ್ನಮ್ಮ, ಅರುಣಮ್ಮ ಹಾಗೂ ರಾಜಮ್ಮ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಬಾಗೇಪಲ್ಲಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೇಲ್ನೋಟಕ್ಕೆ ಥಾರ್‌ ಕಾರು ಚಾಲಕ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸುವ ಮೂಲಕ ಆಟೋ ಚಾಲಕನೂ ಕಾನೂನು ಉಲ್ಲಂಘನೆ ಮಾಡಿದ್ದಾನೆ. ಮತ್ತೊಂದೆಡೆ ಸಂಚಾರಿ ನಿಮಯಮಗಳನ್ನ ಉಲ್ಲಂಘಿಸಿ ರಸ್ತೆ ಬದಿ ಲಾರಿ ನಿಲ್ಲಿಸಿ ಲಾರಿ ಚಾಲಕನೂ ಎಡವಟ್ಟು ಮಾಡಿದ್ದು, ಲಾರಿ ಇಲ್ಲದೆ ಹೋಗಿದ್ರೆ ಜಮೀನಿಗೆ ಆಟೋ ನುಗ್ಗಿ ಸಾವಿನ ಸಂಖ್ಯೆ ಕಡಿಮೆ ಆಗುವ ಸಾಧ್ಯತೆಗಳಿತ್ತು.


Spread the love

About Laxminews 24x7

Check Also

ಸಚಿವ ಸಂಪುಟ ವಿಸ್ತರಣೆಗೆ ಸೋಮವಾರ ಶುಭ ಮುಹೂರ್ತ? – ಹೈಕಮಾಂಡ್ ಮುಂದೆ 2 ದಿನಾಂಕ ಪ್ರಸ್ತಾಪಿಸಿದ ಡಿಕೆಶಿ

Spread the loveನವದೆಹಲಿ: ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ʻಕೈʼ ಶಾಸಕರ ದೆಹಲಿ  ಪರೇಡ್ ಶುರುವಾಗಿದೆ. ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ