ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ದಾಖಲೆಯೊಂದಕ್ಕೆ ಪ್ರಸಕ್ತ ಟೂರ್ನಿ ಸಾಕ್ಷಿಯಾಗಿದೆ. ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕುವ ಮೂಲಕ ‘ಆರೆಂಜ್ ಕ್ಯಾಪ್’ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಆಡಿದ 16 ಪಂದ್ಯಗಳಿಂದ ಒಟ್ಟು 776 ರನ್ ಸಿಡಿಸಿ ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ (2025) ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ 15 ಪಂದ್ಯಗಳಲ್ಲಿ 759 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಆಗ ಸುದರ್ಶನ್ ಅವರಿಗೆ 23 ವರ್ಷ 231 ದಿನಗಳಾಗಿತ್ತು. ಇದೀಗ ಕೇವಲ 15 ವರ್ಷದ ಪ್ರಾಯದಲ್ಲೇ ವೈಭವ್ ಈ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಕೇವಲ ಆರೆಂಜ್ ಕ್ಯಾಪ್ ಮಾತ್ರವಲ್ಲದೆ, ಇಡೀ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಅಬ್ಬರದಿಂದ ದೂಳೆಬ್ಬಿಸಿದ ವೈಭವ್ ಸೂರ್ಯವಂಶಿ ಒಟ್ಟು 5 ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೂರ್ನಿಯ ಶ್ರೇಷ್ಠ ಆಟಗಾರ : ಒಟ್ಟು 436.5 ಪಾಯಿಂಟ್ಸ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಗೌರವ. – 15 ಲಕ್ಷ ರೂ.
ಸೂಪರ್ ಸ್ಟ್ರೈಕರ್: ಇಡೀ ಟೂರ್ನಿಯಲ್ಲಿ 237.3 ರ ಸ್ಟ್ರೈಕ್ರೇಟ್ನಲ್ಲಿ ರನ್ ಚಚ್ಚಿದ ಹಿರಿಮೆ – ಟಾಟಾ ಸಿಯೆರಾ ಕಾರು
ಸೂಪರ್ ಸಿಕ್ಸರ್: ಪ್ರಸಕ್ತ ಸರಣಿಯಲ್ಲಿ ಬರೋಬ್ಬರಿ 75 ಸಿಕ್ಸರ್ಗಳನ್ನು ಸಿಡಿಸಿ ಈ ಪ್ರಶಸ್ತಿ ಜಯಿಸಿದ್ದಾರೆ – 10 ಲಕ್ಷ ರೂ.
ಉದಯೋನ್ಮುಖ ಆಟಗಾರ : ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ಇವರ ಪಾಲಾಗಿದ್ದು 10 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ.
Laxmi News 24×7