Breaking News

4 ಐಪಿಎಲ್‌ ಆವೃತ್ತಿ – ವಿಶಿಷ್ಟ ದಾಖಲೆ ಬರೆದ ಕೊಹ್ಲಿ

Spread the love

ಅಹಮದಾಬಾದ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ವಿಶಿಷ್ಟ ದಾಖಲೆ  ಬರೆದಿದ್ದಾರೆ. ಸತತ 4 ಐಪಿಎಲ್‌ ಆವೃತ್ತಿಯಲ್ಲಿ 600 ರನ್‌ಗಳ ಗಡಿ ದಾಟಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

ಈ ಪಂದ್ಯದಲ್ಲಿ 25 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ಅಂತಿಮವಾಗಿ ಅಜೇಯ 75 ರನ್‌(42 ಎಸೆತ, 9 ಬೌಂಡರಿ, 3 ಸಿಕ್ಸ್‌) ಹೊಡೆದು ಎರಡನೇ ಬಾರಿ ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟಿದ್ದಾರೆ.

ಯಾವ ವರ್ಷ ಎಷ್ಟು ರನ್‌?
2023 –> 14 ಇನ್ನಿಂಗ್ಸ್‌ – 639 ರನ್‌
2024 –> 15 ಇನ್ನಿಂಗ್ಸ್‌ – 741 ರನ್‌(ಆರೆಂಜ್‌ ಕ್ಯಾಪ್‌)
2025 –>16 ಇನ್ನಿಂಗ್ಸ್‌ – 657 ರನ್‌
2026 –> 16 ಇನ್ನಿಂಗ್ಸ್‌ – 675 ರನ್‌

ಈ ಆವೃತ್ತಿಯಲ್ಲಿ ಕೊಹ್ಲಿ 4 ಬಾರಿ ನಾಟೌಟ್‌ ಆಗಿದ್ದರು. ಒಂದು ಶತಕ (105* ರನ್‌), 5 ಅರ್ಧಶತಕ ಹೊಡಿದ್ದಾರೆ. ಒಟ್ಟು 73 ಬೌಂಡರಿ, 25 ಸಿಕ್ಸ್‌, 165.84 ಸ್ಟ್ರೈಕ್‌ ರೇಟ್‌ನಲ್ಲಿ ಕೊಹ್ಲಿ 675 ರನ್‌ ಚಚ್ಚಿದ್ದಾರೆ.


Spread the love

About Laxminews 24x7

Check Also

ಸಚಿವ ಸಂಪುಟ ವಿಸ್ತರಣೆಗೆ ಸೋಮವಾರ ಶುಭ ಮುಹೂರ್ತ? – ಹೈಕಮಾಂಡ್ ಮುಂದೆ 2 ದಿನಾಂಕ ಪ್ರಸ್ತಾಪಿಸಿದ ಡಿಕೆಶಿ

Spread the loveನವದೆಹಲಿ: ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ʻಕೈʼ ಶಾಸಕರ ದೆಹಲಿ  ಪರೇಡ್ ಶುರುವಾಗಿದೆ. ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ