Breaking News

ಖಾಸಗಿ ವಿಡಿಯೋ ಇಟ್ಕೊಂಡು ಸಂಬಂಧಿಯಿಂದಲೇ ಬ್ಲ್ಯಾಕ್‌ಮೇಲ್‌ – ಹಣ ಹೊಂದಿಸಲು ಅತ್ತಿಗೆಯನ್ನೇ ಮುಗಿಸಿದ ನಾದಿನಿ

Spread the love

ಚಿಕ್ಕಬಳ್ಳಾಪುರ: ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಕದ್ದು ಆಕೆಯ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಯಾರೂ ಊಹೆ ಮಾಡದ ಸಿನಿಮೀಯ ಟ್ವಿಸ್ಟ್ ಸಿಕ್ಕಿದೆ. ನಾದಿನಿಯೇ ತನ್ನ ಸಹೋದರ ಸಂಬಂಧಿಯ ಜೊತೆ ಸೇರಿ ಅಣ್ಣನ ಹೆಂಡತಿಯನ್ನ ಕೊಂದಿರೋದು ಪೊಲೀಸರ  ತನಿಖೆಯಲ್ಲಿ ಬಯಲಾಗಿದೆ.

ನಗರದ ಬಾಪೂಜಿ ನಗರದ ನರಸಿಂಹಮೂರ್ತಿಯವರ ಮನೆಯಲ್ಲಿ ಮೇ 28 ರಂದು ಆತನ ಸೊಸೆ ಪುಷ್ಪಲತಾಳನ್ನ (23) ಕತ್ತು ಕೊಯ್ದು ಕೊಲೆ ಮಾಡಿದಂತೆ ಶವ ಪತ್ತೆಯಾಗಿತ್ತು. ಪುಷ್ಪಲತಾಳ ಜೊತೆಗಿದ್ದ ಆಕೆಯ ನಾದಿನಿ ಭವ್ಯಾ, ಯಾರೋ ಬಂದು ಆಗ್ತಿಗೆಯನ್ನ ಕೊಂದು ಆಕೆಯ ಕತ್ತಿನ ಚಿನ್ನದ ಸರ ಕಿತ್ಕೊಂಡು ಹೋದ್ರು. ನನಗೆ ಸ್ಪ್ರೇ ಹೊಡೆದ್ರು ನಾನು ತಲೆ ಸುತ್ತಿ ಬಿದ್ದು ಹೋಗಿದ್ದೆ. ಅಂತ ರಾಬರಿ ಕಥೆ ಕಟ್ಟಿದ್ದಳು.

ತನಿಖೆ ವೇಳೆ ಬಯಲಾದ ಅಸಲಿ ಸತ್ಯನೇ ಬೇರೆ ಆಗಿತ್ತು. ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ. ಸ್ವತಹ ನಾದಿನಿ ಭವ್ಯಾಳೆ ಅನ್ನೋದು ಗೊತ್ತಾಗಿದೆ. ಅತ್ತಿಗೆಯ ಚಿನ್ನಾಭರಣ ಕಳ್ಳತನ ಮಾಡಲು ಹೊಸಕೋಟೆ ಮೂಲದ ಸಹೋದರ ಸಂಬಂಧಿ ಲೋಹಿತ್ ಅಲಿಯಾಸ್ ಲಲ್ಲು ಜೊತೆ ಸೇರಿ ಕೊಲೆ ಮಾಡಿರೋದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.

ಪುಷ್ಪಲತಾ ಕೊಲೆ ಪ್ರಕರಣ ರಹಸ್ಯ ತಿಳಿಯುತ್ತಿದ್ದಂತೆ ಪೊಲೀಸರು, ಮೃತಳ ನಾದಿನಿ ಭವ್ಯಾ ಹಾಗೂ ಆಕೆಯ ಸಹೋದರ ಸಂಬಂಧಿ ಹೊಸಕೋಟೆ ಮೂಲದ ಲೋಹಿತ್ ಕುಮಾರ್ ಅಲಿಯಾಸ್ ಲುಲ್ಲು ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ, ಭವ್ಯಾ ಮದುವೆ ಆಗಿದ್ರೂ ತನ್ನ ಬಾಯ್‌ಫ್ರೆಂಡ್ ಜೊತೆ ಸಂಬಂಧ ಹೊಂದಿದ್ದಳಂತೆ. ಅದೇ ವಿಡಿಯೋಗಳನ್ನ ಇಟ್ಟುಕೊಂಡು ಬಾಯ್ ಫ್ರೆಂಡ್ ಸಹ ಬ್ಲಾಕ್ ಮೇಲ್ ಮಾಡ್ತಿದ್ದಾನಂತೆ. ಹೀಗಾಗಿ ಬಾಯ್ ಫ್ರೆಂಡ್ ಗೆ ವಾರ್ನಿಂಗ್ ಕೊಟ್ಟು ಬುದ್ಧಿ ಕಲಿಸು ಅಂತ ಖಾಸಗಿ ವಿಡಿಯೊಗಳನ್ನು ಲೋಹಿತ್‌ಗೆ ಕಳಿಸಿದ್ದಳಂತೆ. ಆದ್ರೆ ಲೋಹಿತ್ ಅದೇ ವಿಡಿಯೋ ಗಳನ್ನ ಇಟ್ಟುಕೊಂಡು ಭವ್ಯಾಗೆ ಬ್ಲಾಕ್ ಮೇಲ್ ಮಾಡಿದ್ದಾನೆ.

2-3 ಬಾರಿ ಲಕ್ಷ ಲಕ್ಷ ಹಣ ಕೊಟ್ಟಿದ್ದ ಭವ್ಯ ಬಳಿ ಮತ್ತೆ ಹಣ ಇರಲಿಲ್ಲ. ಇದ್ರಿಂದ ಆತನಿಗೆ ಮತ್ತೆ ಹಣ ಕೊಡಲು ಅತ್ತಿಗೆಯ ಚಿನ್ನಾಭರಣವನ್ನೇ ಕದ್ದುಕೊಂಡು ಹೋಗು ನಾನು ಹೆಲ್ಪ್ ಮಾಡ್ತೀನಿ ಅಂತ ಮನೆಗೆ ಕರೆಸಿಕೊಂಡಿದ್ದಾಳೆ. ಮನೆಯಲ್ಲಿ ಎಲ್ಲರೂ ಟ್ರಿಪ್‌ಗೆ ಅಂತ ಹೋಗಿದ್ದಾಗ ಲೋಹಿತ್‌ನನ್ನು ಮನೆಗೆ ಕರೆಸಿಕೊಂಡು ಪುಷ್ಪಲತಾಳ ಸರ ಚಿನ್ನಾಭರಣ ದೋಚುವ ಸಂಚು ಮಾಡಿದ್ದಾರೆ. ಆಕೆ ಬದುಕಿದ್ರೆ ತಮಗೆ ಕಷ್ಟ ಅಂತ ತಿಳಿದು ಪುಷ್ಪಲತಾಳನ್ನ ದಿಂಬಿ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಸರ ಕಿವಿ ಓಲೆ ಕದ್ದಿದ್ದಾರೆ.

ಅತ್ತಿಗೆಯ ಕೊಲೆಗೈದು ಆಕೆಯ ಚಿನ್ನಾಭರಣ ದೊಚಿದ್ದಲ್ಲದೆ. ಮಾಡಿದ ಪಾಪ ಮುಚ್ಚಿಟ್ಟುಕೊಳ್ಳಲು ಸಿನಿಮಾ ಕಥೆ ಕಟ್ಟಿದ್ದ ಆರೋಪಿಗಳಾದ ಭವ್ಯಾ ಹಾಗೂ ಲೊಹಿತ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನೂ , ಭವ್ಯಾಳ ಸ್ಕೇಚ್ ಗೆ ಆಕೆಯ ತಾಯಿ ವಿಜಯಮ್ಮ, ಅಜ್ಜಿ ನಾಗಮ್ಮ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದ್ದು ಪೋಲಿಸರು ಅವರನ್ನ ಸಹ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.


Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಜೂನ್ 1ರಂದು ಬೃಹತ್ ಪ್ರತಿಭಟನೆ

Spread the loveಬೆಳಗಾವಿ: ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ಬೆಳಗಾವಿಯ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ