Breaking News

ಐಪಿಎಲ್‌ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ – ದಾಖಲೆ ಬರೆದ ಜಿಯೋಸ್ಟಾರ್

Spread the love

ಮುಂಬೈ: 2026ರ ಐಪಿಎಲ್ ಟೂರ್ನಿ ಪ್ಲೇ ಆಫ್ ಹಂತ ತಲುಪುತ್ತಿದ್ದು, ತಂಡಗಳ ನಡುವಿನ ಹಣಾಹಣಿ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಅಧಿಕೃತ ಪ್ರಸಾರ ಸಂಸ್ಥೆಗಳಾದ ಜಿಯೋಸ್ಟಾರ್, ಟಿವಿ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಾದ್ಯಂತ ವೀಕ್ಷಕರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಟೂರ್ನಿಯ ಒಟ್ಟಾರೆ ವೀಕ್ಷಕರ ಸಂಖ್ಯೆ ಬರೋಬ್ಬರಿ 110 ಕೋಟಿ ದಾಟಿದೆ. ಟಿವಿ ವೀಕ್ಷಣೆಯಲ್ಲಿ ಉತ್ತಮ ದಾಖಲೆ ಬರೆದಿದ್ದು, 50 ಕೋಟಿ ವೀಕ್ಷಕರ ಗಡಿಯತ್ತ ಮುನ್ನಡೆಯುತ್ತಿದೆ. ಇದೇ ವೇಳೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಕರ ಸಂಖ್ಯೆ ಶೇ. 15ರಷ್ಟು ಹೆಚ್ಚಳವಾಗಿದೆ.

ವೀಕ್ಷಣೆಯ ಸಮಯವೂ ಶೇ. 7 ರಷ್ಟು ಹೆಚ್ಚಾಗಿದೆ. ಕನೆಕ್ಸೆಡ್ ಟಿವಿ (ಸಿಟಿವಿ) ಮಾಧ್ಯಮದಲ್ಲಿ ಶೇ. 25 ರಷ್ಟು ಬೆಳವಣಿಗೆಯಾಗಿದ್ದು, ವೀಕ್ಷಣೆಯ ಸಮಯ ಶೇ. 20 ರಷ್ಟು ಏರಿಕೆ ಕಂಡಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ