Breaking News

ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ

Spread the love

ಚಾಮರಾಜನಗರ: ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ 20 ಲಕ್ಷ ರೂ. ಪರಿಹಾರ ಘೋಷಿಸಿದೆ.

ಭಾನುವಾರ (ಮೇ 10) ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ವೇಳೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಬಾಲಕ ಸಾವನ್ನಪ್ಪಿದ್ದ. ಸದ್ಯ ಅರಣ್ಯ ಇಲಾಖೆ ಬಾಲಕನ ಕುಟುಂಬಸ್ಥರಿಗೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಈಗಾಗಲೇ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಇನ್ನುಳಿದ ಹಣವನ್ನು ಅಕೌಂಟ್ ಮಾಹಿತಿ ಪಡೆದು ಶೀಘ್ರದಲ್ಲೇ ಕಳುಹಿಸಲು ಅಧಿಕಾರಿಗಳ ತೀರ್ಮಾನಿಸಿದ್ದಾರೆ.

ಇನ್ನೂ ಬಾಲಕನ ಕೊಂದ ಚಿರತೆಯ ಚಲನವಲನ ಥರ್ಮಲ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಸದ್ಯ ಅರಣ್ಯ ಇಲಾಖೆ ಚಿರತೆ ಸೆರೆಗೆ ಮುಂದಾಗಿದ್ದು, ನಾಲ್ಕು ಬೋನ್ ಅಳವಡಿಕೆ ಮಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಥರ್ಮಲ್ ಡ್ರೋನ್ ಟೀಂ ಕೂಡ ರಾತ್ರಿಯಿಡಿ ಚಿರತೆಯ ಮೇಲೆ ನಿಗಾ ವಹಿಸಿದ್ದಾರೆ. ಸದ್ಯಕ್ಕೆ ತಾತ್ಕಾಲಿಕವಾಗಿ ನಾಗಮಲೆಗೆ ಹೋಗಲೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ಏನಿದು ಘಟನೆ?
ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬೆಂಗಳೂರು ಮೂಲದ ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ಹರ್ಷಿತ್ ಗೌಡನನ್ನು ಚಿರತೆ ಪೋಷಕರ ಕಣ್ಣೆದುರಲ್ಲೇ ಎಳೆದೊಯ್ದು ಕೊಂದು ಹಾಕಿದ ಘೋರ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಬಳಿ ನಡೆದಿತ್ತು. ಭಾನುವಾರ ಬೆಳಿಗ್ಗೆ ಕುಟುಂಬದ 10 ಮಂದಿ ಸದಸ್ಯರೊಂದಿಗೆ ಹರ್ಷಿತ್ ನಾಗಮಲೆ ಹಾದಿಯಲ್ಲಿ ತೆರಳುತ್ತಿದ್ದಾಗ, ಇಂಡಿಗನತ್ತ ಸಮೀಪ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ, ಅರಣ್ಯದೊಳಗೆ ಬಾಲಕನ ಶವ ಪತ್ತೆಯಾಗಿತ್ತು.

ಕಾಡಿನೊಳಗೆ ಹೋಗುವಾಗ 200 ರೂ. ಹೆಚ್ಚಿನ ಹಣ ತೆಗೆದುಕೊಂಡು ಒಳಗಡೆ ಬಿಟ್ಟಿದ್ದಾರೆ. ಮಗು ಮೇಲೆ ದಾಳಿಯಾಗಿ ಅರ್ಧ ಗಂಟೆಯಾದರೂ ಯಾವ ಅರಣ್ಯಾಧಿಕಾರಿಯೂ ಬಂದಿರಲಿಲ್ಲ. ನಂತರ ಜನ ಜಗಳ ಮಾಡಿದಾಗ ಮೃತದೇಹ ಹುಡುಕಿದ್ದಾರೆ. ನಮ್ಮ ಮಗುವಿಗೆ ಆದ ಹಾಗೆ ಯಾರಿಗೂ ಆಗಬಾರದು. ಈ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್: ಡಿಕೆಶಿ

Spread the loveಬೆಂಗಳೂರು: ಮೇ 13ಕ್ಕೆ ಬೆಂಗಳೂರು  ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ