Breaking News

ಸೆಪ್ಟೆಂಬರ್ ತನಕ ಜಿಬಿಎ ಎಲೆಕ್ಷನ್ ಮುಂದೂಡಿಕೆಗೆ ಸರ್ಕಸ್ – ಸುಪ್ರೀಂ ಮೊರೆ ಹೋದ ಕಾಂಗ್ರೆಸ್

Spread the love

ಬೆಂಗಳೂರು: ಜಿಬಿಎ ಎಲೆಕ್ಷನ್  ಮುಂದೂಡಿಕೆ ಕಾಂಗ್ರೆಸ್ ಸರ್ಕಾರ ಸರ್ಕಸ್ ನಡೆಸಿದೆ. ಸೆಪ್ಟೆಂಬರ್ ತನಕ ಚುನಾವಣೆಗೆ ಮುಂದೂಡಿಕೆಗೆ ಸುಪ್ರೀಂಕೋರ್ಟ್  ಮೊರೆ ಹೋಗಿದೆ.

ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ, ಸಿದ್ಧತೆಗೆ ನಾಲ್ಕು ತಿಂಗಳ ಅವಕಾಶ ನೀಡುವಂತೆ ಮನವಿ ಮಾಡುತ್ತಿದೆ. ಜೂನ್ ಒಳಗೆ ದಿನಾಂಕ ಘೋಷಣೆ ಮಾಡಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ.

ಇನ್ನೊಂದೆಡೆ ಜಿಬಿಎ ಚುನಾವಣೆ ಬಗ್ಗೆ ನಿನ್ನೆ (ಮೇ 10) ಖಾಸಗಿ ಹೋಟೆಲ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಎದುರೇ ಸಿಎಂ, ಡಿಸಿಎಂ ಬಿಸಿಯೇರಿದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಬೇಡವೇ ಬೇಡ. 3 ತಿಂಗಳು ಮುಂದೆ ಹಾಕೋಣ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ.

ಇನ್ನು ಗುರುವಾರ ನಡೆದ ಸಭೆಯಲ್ಲಿ ಜಿಬಿಎ ಚುನಾವಣೆ ನಡೆಸೋಣ ಎಂದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು ಎನ್ನಲಾಗಿದೆ. ಆಗ ಡಿಸಿಎಂ ಬೇಡ, 3 ತಿಂಗಳು ಹೋಗಲಿ ಎಂದಾಗ ಡಿಸಿಎಂ ಪ್ರಸ್ತಾಪಕ್ಕೆ ಬೆಂಗಳೂರು ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಸಿದ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರು, ಸುಪ್ರೀಂಕೋರ್ಟ್ ಆದೇಶಕ್ಕೆ ಮುಕ್ತವಾಗಿದ್ದೇವೆ. ಜಿಬಿಎ ಚುನಾವಣೆ ಆಗಬೇಕಾದರೆ ಸಿದ್ಧತೆ ಆಗಬೇಕು. ಆದರೆ ಕೇಂದ್ರದ ಜನಗಣತಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಗಣತಿ ಕಷ್ಟ, ಹಾಗಾಗಿ ಸದ್ಯಕ್ಕೆ ಚುನಾವಣೆ ನಡೆಸೋದು ಕಷ್ಟ. ಮನೆಗಳ ಪಟ್ಟಿಯೂ ಕಷ್ಟ ಆಗ್ತಿದೆ, ಜನ ಕೆಲಸಕ್ಕೆ ಹೋಗ್ತಾರೆ ಸಿಗಲ್ಲ. ಇವೆಲ್ಲವೂ ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದೇವೆ. ಕೋರ್ಟ್ ಮನವರಿಕೆ ಮಾಡುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ

Spread the loveಕಲಬುರಗಿ/ಬೀದರ್: ಜೂನ್ 28ರಂದು ಬೀದರ್‌ನ ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ