Breaking News

ಅಡುಗೆ ಎಣ್ಣೆ ಬಳಕೆ ಮಿತಿಗೊಳಿಸಲು ಮೋದಿ ಕರೆ ಬೆನ್ನಲ್ಲೇ ಎಣ್ಣೆ ದರ ಇಳಿಕೆ – ಅಕ್ಕಿ ರೇಟ್ ಏರಿಕೆ

Spread the love

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ಭಾರತದ ಮೇಲೆ ಪರಿಣಾಮ ಬೀರಿದ್ದು, ಈ ಬಿಕ್ಕಟ್ಟು ನಿವಾರಣೆಗೆ ಮೋದಿ  ಕೆಲ ಸಲಹೆ ಮತ್ತು ತ್ಯಾಗಗಳಿಗೆ ಕರೆ ನೀಡಿದ್ದಾರೆ. ಅವುಗಳಲ್ಲಿ ಜನ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸುವ ಮನವಿ ಸಹ ಒಂದಾಗಿದೆ. ಈ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ  ಬೆಲೆ ಕುಸಿತವಾಗಿದ್ದರೇ, ಅಕ್ಕಿ (Rice) ದರ ಗಗನಕ್ಕೇರಿದೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದೇಶದ ಆರ್ಥಿಕತೆಯ ಒಳಿತಿನ ದೃಷ್ಟಿಯಿಂದ ಕೆಲ ಮನವಿಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗೃಹಿಣಿಯರಿಗೆ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಅನ್ನೋದು ಸಹ ಒಂದಾಗಿದೆ. ಆರೋಗ್ಯ ಹಾಗೂ ಆರ್ಥಿಕತೆಯ ಉದ್ದೇಶದಿಂದ ಈ ಕರೆ ನೀಡಿದ್ದಾರೆ.  ಬೆಲೆ ಕಡಿಮೆಯಾಗಿದೆ. ಎಲ್ಲಾ ಬ್ರ್ಯಾಂಡ್‌ನ ಅಡುಗೆ ಎಣ್ಣೆಗಳಲ್ಲೂ ಒಂದು ಲೀಟರ್‌ಗೆ ಮೂರು ರೂಪಾಯಿಯಿಂದ ಐದು ರೂಪಾಯಿವರೆಗೂ ಕಡಿಮೆಯಾಗಿದೆ. ಒಂದು ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆ, ಪೂರೈಕೆ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಅಡುಗೆ ಎಣ್ಣೆ – ಹಳೆಯ ದರ (1 ಲೀ.) – ಹೊಸ ದರ (1 ಲೀ.)
ಫಾಮ್ ಆಯಿಲ್ – 143 ರೂ. – 141 ರೂ.
ಸನ್ ಪ್ಯೂರ್ – 170 ರೂ. – 167 ರೂ.
ಕಡಲೆಕಾಯಿ – 190 ರೂ. – 185 ರೂ.

ಇದರ ನಡುವೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಅಕ್ಕಿ ದರ ಜಿಗಿತವಾಗುತ್ತಿದೆ. ಎಲ್ಲಾ ವಿಧದ ಅಕ್ಕಿ ಬೆಲೆಯಲ್ಲಿ 10% ನಷ್ಟು ಏರಿಕೆಯಾಗಿದೆ. ಪ್ರಮುಖವಾಗಿ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದರೆ ಬೇರೆ ದೇಶಗಳಿಗೆ ನಮ್ಮ ರಾಜ್ಯದ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ರಪ್ತು ಆಗುತ್ತಿದೆ. ಜೊತೆಗೆ ಹಳೆಯ ಅಕ್ಕಿ ಸಪ್ಲೈ ಕಡಿಮೆಯಾಗಿರೋದೇ ಕಾರಣವೆನ್ನಲಾಗಿದೆ. ಬಾಸ್ಮತಿ ಹಾಗೂ ಜೀರಾ ರೈಸ್‌ನಲ್ಲಿ ಕೆ.ಜಿಗೆ 40 ರೂಪಾಯಿಯಷ್ಟು ಏರಿಕೆಯಾಗಿದೆ.

ಅಕ್ಕಿ – ಹಳೆಯ ದರ (1 ಕೆ.ಜಿಗೆ) – ಹೊಸ ದರ (1 ಕೆ.ಜಿಗೆ)
ಬಾಸ್ಮತಿ ರೈಸ್ – 90 ರೂ. – 115 ರೂ.
ಜೀರಾ ರೈಸ್ – 180 ರೂ. – 220 ರೂ.
ಸೋನಾಮಸೂರಿ – 40 ರೂ. – 45 ರೂ.
ಬುಲೆಟ್ ರೈಸ್ – 65 ರೂ. – 75 ರೂ.

ಒಟ್ಟಿನಲ್ಲಿ ಮೋದಿ ಕರೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿರೋದು ಗೃಹಿಣಿಯರ ಸಂತಸಕ್ಕೆ ಕಾರಣವಾಗಿದ್ದರೆ, ಅಕ್ಕಿ ದರ ಬೆಲೆ ಏರಿಕೆ ಜೇಬು ಸುಡುತ್ತಿದೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ