Breaking News

ಸಂಸಾರದಲ್ಲೇ ಸಾರ್ಥಕತೆ ಕಂಡವರು ಹೇಮರೆಡ್ಡಿ ಮಲ್ಲಮ್ಮ; ಶಶಿಕಲಾ ನ್ಯಾಮಗೌಡ

Spread the love

ಮಹಾಸಾಧ್ವಿ ಮಲ್ಲಮ್ಮನವರು ಸಂಸಾರಿಕ ಜೀವನದಲ್ಲೇ ಆಧ್ಯಾತ್ಮಿಕ ಸಾರ್ಥಕತೆ ಕಂಡವರು ಎಂದು ಅವರ ಜೀವನದ ಮಹತ್ವವನ್ನು ಉಪನ್ಯಾಸಕಿ ಶಶಿಕಲಾ ನ್ಯಾಮಗೌಡ ಅವರು ಸ್ಮರಿಸಿದರು.

ಬೆಳಗಾವಿಯ ರೆಡ್ಡಿ ಸಮಾಜದ ವತಿಯಿಂದ ಸದಾಶಿವನಗರದಲ್ಲಿರುವ ರೆಡ್ಡಿ ಭವನದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ರೆಡ್ಡಿ ಸಮಾಜದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಗಣ್ಯರ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ವೇಳೆ ಉಪನ್ಯಾಸ ನೀಡಿದ ಶಶಿಕಲಾ ನಾಡಗೌಡ ಅವರು ಪೂಜೆ, ಜಪತಪಗಳಲ್ಲಿಯೇ ಜೀವನವನ್ನು ಕಳೆಯದೇ, ಸಂಸಾರೀಕ ಜೀವನದಲ್ಲೇ ಪಾರಮಾರ್ಥಿಕ ಸಾರ್ಥಕತೆಯನ್ನು ಕಂಡವಳು ಹೇಮರೆಡ್ಡಿ ಮಲ್ಲಮ್ಮ. ಅವರಿಗೆ ಕಾಯಕದಲ್ಲೇ ಶಿವನೊಲಿದ. ಸಂಸಾರೀಕ ಜೀವನದಲ್ಲಿ ಆಧ್ಯಾತ್ಮಿಕತೆ ಸಿಗುವುದಿಲ್ಲ ಎನ್ನುವವರಿಗೆ ಮಲ್ಲಮ್ಮನ ಜೀವನ ಮಾದರಿ. ಕೇವಲ ಜಯಂತಿಯನ್ನು ಆಚರಿಸದೇ, ನಾರಿಯೆನ್ನುವವಳು ಮನೆಯನ್ನು ಕಟ್ಟುವವಳಾಗಿರಬೇಕೇ ಹೊರತು ಮನೆ ಒಡೆಯುವವಳಾಗಿರಬಾರದು ಎಂಬ ಮಲ್ಲಮ್ಮನ ಸಂದೇಶವನ್ನು ಅರಿಯಬೇಕು ಎಂದರು.

ಇನ್ನು ರೇಣುಕಾ ಕಠಾರಿ ಅವರು 12 ರಿಂದ 16ನೇ ಶತಮಾನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡ ಹೆಣ್ಣು ಮಕ್ಕಳು ಅತಿ ವಿರಳ. ಸಮಾಜದ ವಿರೋಧವನ್ನು ಕಟ್ಟಿಕೊಂಡು ನಮಗೂ ಹಕ್ಕಿದೆ ಎಂಬ ಧೋರಣೆಯನ್ನು ದಿಟ್ಟವಾಗಿ ಪ್ರತಿಪಾದಿಸಿದವರು ಅಕ್ಕ ಮಹಾದೇವಿ. ಅದರಂತೆ ಹೇಮರೆಡ್ಡಿ ಮಲ್ಲಮ್ಮನವರ ಜೀವನಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಉಪಾಧ್ಯಕ್ಷರಾದ ಕಾಂತು ಜಾಲಿಹೊಳಿ, ಇಂದಿರಾಬಾಯಿ ಮಳ್ಳಿ, ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ