ಹೈದರಾಬಾದ್: ಭಾರತೀಯರೇ ಮದುವೆಗಳಿಗೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದ ನಡುವೆ ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸಿ. ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತ ಅವಲಂಬಿತವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್‌ನಂತಹ ಉತ್ಪನ್ನಗಳನ್ನು ಸಂಯಮದಿಂದ ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ಪೆಟ್ರೋಲಿಯಂ ಉತ್ಪನ್ನಗಳನ್ನ ಬಳಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.
ಮುಂದಿನ ಒಂದು ವರ್ಷ ಚಿನ್ನ ಖರೀದಿಸಬೇಡಿ. ಮನೆಯಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮ ಅಥವಾ ಮದುವೆ ಇದ್ದರೂ ಸಹ. ಜನರು ಕನಿಷ್ಠ ಒಂದು ವರ್ಷದವರೆಗೆ ಚಿನ್ನಾಭರಣ ಖರೀದಿಸುವುದನ್ನು ನಿಲ್ಲಿಸಬೇಕು. ದೇಶವು ಯುದ್ಧ ಅಥವಾ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಜನರು ರಾಷ್ಟ್ರದ ಹಿತದೃಷ್ಟಿಯಿಂದ ಸರ್ಕಾರಕ್ಕೆ ತಮ್ಮ ಚಿನ್ನವನ್ನು ದಾನ ಮಾಡುತ್ತಾರೆ. ಇಂದು ಸರ್ಕಾರಕ್ಕೆ ನಿಮ್ಮ ಚಿನ್ನದ ದೇಣಿಗೆಗಳು ಅಗತ್ಯವಿಲ್ಲದಿದ್ದರೂ, ರಾಷ್ಟ್ರದ ಹಿತದೃಷ್ಟಿಯಿಂದ ಜನರು ಕನಿಷ್ಠ ಒಂದು ವರ್ಷದವರೆಗೆ ಹೊಸ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಖರೀದಿಸುವುದನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.
ಎಂತಹದೇ ಕಾರ್ಯಕ್ರಮವಿದ್ದರೂ ಚಿನ್ನ ಖರೀದಿಸಲ್ಲ ಎನ್ನುವ ಸಂಕಲ್ಪ ಮಾಡಬೇಕು. ನಾಗರಿಕರು ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಅನಗತ್ಯವಾಗಿ ಅಥವಾ ಅತಿಯಾಗಿ ಬಳಸಿದರೆ, ಅದು ದೇಶದ ಇಡೀ ಆರ್ಥಿಕತೆಯ ಮೇಲೆ ನೇರ ಮತ್ತು ಅತ್ಯಂತ ಋಣಾತ್ಮಕ ಪರಿಣಾಮ ಬೀರುತ್ತದೆ. ಮಿತ ಬಳಕೆಯಿಂದ ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೇ, ಯುದ್ಧದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನಿಂದ ಭಾರತದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಹಣವನ್ನು ಅಥವಾ ವಿದೇಶಿ ಕರೆನ್ಸಿಯನ್ನು ಉಳಿಸುವುದು ನಮ್ಮ ನಿಜವಾದ ದೇಶಭಕ್ತಿ ಎಂದು ಮೋದಿ ಕರೆ ನೀಡಿದ್ದಾರೆ.
Laxmi News 24×7