Breaking News

ಲಿವ್ ಇನ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ – ಇತ್ತ ಪತಿ, ಎರಡು ಮಕ್ಕಳ ಬಿಟ್ಟು ಜೊತೆಗಿದ್ದವ್ಳು ಎಸ್ಕೇಪ್

Spread the love

ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ನಡೆದಿದೆ.

ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ಯುವಕ. ದಾವಣಗೆರೆ  ಮೂಲದ ಮಹಿಳೆ ಹಾಗೂ ಮೃತ ಯುವಕ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇನ್‌ಸ್ಟಾಗ್ರಾಮ್ ಮುಖಾಂತರ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು.

ಮಹಿಳೆಗೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಸದ್ಯ ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಂದಿದ್ದಳು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ಬಾಡಿಗೆ ಮನೆ ಪಡೆದು ಗಂಡ-ಹೆಂಡತಿ ಎಂದು ನಂಬಿಸಿ, ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ತಿಂಗಳಿಗೆ 3 ಸಾವಿರ ರೂ.ಯಂತೆ ಬಾಡಿಗೆ ಕೊಟ್ಟು ಜೊತೆಯಲ್ಲಿದ್ದರು.

ಇತ್ತೀಚಿಗೆ ಮಹಿಳೆ ನನ್ನ ಮೆಂಟೇನೆನ್ಸ್ ಆಗಲ್ಲ ಬಿಟ್ಟು ಬಿಡು ಎಂದು ಯುವಕನಿಗೆ ಕಿರುಕುಳ ನೀಡಿದ್ದಳು. ಇದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಯುವಕನ ಸಾವಿಗೆ ಮಹಿಳೆಯೇ ಕಾರಣ ಎಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.


Spread the love

About Laxminews 24x7

Check Also

ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು: ವಜ್ರ, ಚಿನ್ನ, ಫ್ಲಾಟ್‌ಗಳು ಪತ್ತೆ, ಎಸಿಬಿ ಅಧಿಕಾರಿಗಳೇ ಶಾಕ್

Spread the loveಹೈದರಾಬಾದ್: ಅಮಾನತುಗೊಂಡಿದ್ದ ತಹಶೀಲ್ದಾರ್ ಮತ್ತು ಜಂಟಿ ಸಬ್​ ರಿಜಿಸ್ಟ್ರಾರ್ ತುಮ್ಮಕೊಮ್ಮ ಸುಚರಿತ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ