Breaking News

ಟ್ರಾೃಕ್ಟರ್ ಮೇಲಿಂದ ಬಿದ್ದು ಬಾಲಕ ಸಾವು

Spread the love

ಬೆಳಗಾವಿ: ಟ್ರಾೃಕ್ಟರ್ ಇಂಜಿನ್‌ದಲ್ಲಿ ಮಕ್ಕಳು ಕುಳಿತು ಪ್ರಯಾಣಿಸುತ್ತಿದ್ದ ವೇಳೆ ಓರ್ವ ಬಾಲಕ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ಮಾಸ್ತಮರಡಿ-ಗಜಮನಾಳ ರಸ್ತೆಯಲ್ಲಿ ಸಂಭವಿಸಿದೆ.
ಮಾಸ್ತಮರಡಿಯ ಮನೋಜ ಬಸವರಾಜ ಮಿಚಿಡೊಳ್ಳಿ (13) ಮೃತ ಬಾಲಕ. ಸೋಮವಾರ ಸಂಜೆ ಗಂಗಪ್ಪ ನಾಯ್ಕ ಎಂಬುವವರು ತಮ್ಮ ಟ್ರಾೃಕ್ಟರ್‌ಗೆ ನೇಗಿಲು ಜೋಡನೆ ಮಾಡಿಕೊಂಡು ಮೃತ ಮನೋಜ ಹಾಗೂ ಇತರೆ ಇಬ್ಬರು ಬಾಲಕರನ್ನು ಕೂಡ್ರಿಸಿಕೊಂಡು ಹೋಗುತ್ತಿದ್ದಾಗ ಮನೋಜ ಕೆಳಗೆ ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣವೇ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟೊತ್ತಿಗೆ ಮನೋಜ ಬದುಕುಳಿದಿರಲಿಲ್ಲ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ಘಟಿಕೋತ್ಸವದಲ್ಲಿ ವಂದೇ ಮಾತರಂ ಪೂರ್ಣ ಹಾಡು – ವಿಟಿಯು ಕುಲಪತಿ

Spread the loveಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಹಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಈಗಾಗಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ