Breaking News

ವೃದ್ಧನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಡ್ಯಾನ್ಸ್‌ – ಪುಡಿ ರೌಡಿಯ ವಿಕೃತಿ ಕ್ಯಾಮೆರಾದಲ್ಲಿ ಸೆರೆ

Spread the love

ಹಾಸನ: ಪುಡಿ ರೌಡಿಯೊಬ್ಬ ಕುಡಿದು ಬಂದು ವೃದ್ಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನದ  ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ತಮ್ಮೇಗೌಡ (68) ಎಂದು ಗುರುತಿಸಲಾಗಿದೆ. ಬೋರೇಗೌಡ ಅಲಿಯಾಸ್ ಲೋಕೇಶ್ (49) ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ ಪುಡಿ ರೌಡಿ ಎಂದು ಗೊತ್ತಾಗಿದೆ. ತಮ್ಮೇಗೌಡ ವ್ಯಾಪಾರ ಮಾಡಲು ತಮ್ಮ ತೋಟದಲ್ಲಿ ಎಳನೀರು ಕಡೆವಿಕೊಂಡು ಪತ್ನಿಯೊಂದಿಗೆ ಬರುತ್ತಿದ್ದರು. ಈ ವೇಳೆ ಎದುರಾದ ಬೋರೇಗೌಡ ಏಕಾಏಕಿ ಮಚ್ಚನ್ನು ಉಲ್ಟಾ ಮಾಡಿಕೊಂಡು ಥಳಿಸಿದ್ದಾನೆ. ಮಚ್ಚಿನಿಂದ ಹಲ್ಲೆ ನಡೆಸುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ನೆಲಕ್ಕೆ ಬಿದ್ದು ಬೇಡಿಕೊಂಡರು ಬಿಡದೆ ಹಲ್ಲೆ ನಡೆಸಿದ್ದಾನೆ. ಪತಿ ಮೇಲೆ ಹಲ್ಲೆ ಮಾಡುವುದನ್ನು ಕಂಡು ತಮ್ಮೇಗೌಡರ ಪತ್ನಿ ಹೆದರಿ ಓಡಿ ಹೋಗಿದ್ದಾರೆ. ಹಲ್ಲೆ ನಡೆಸಿದ ನಂತರ ಡ್ಯಾನ್ಸ್ ಮಾಡುತ್ತಾ ವಿಕೃತಿ ಮೆರೆದಿರುವ ಬೋರೇಗೌಡ, ತಮ್ಮೇಗೌಡರ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ವೃದ್ಧೆ ಓಡಿ ಹೋಗಿ ಮನೆಯ ಬಾಗಿಲು ಹಾಕಿಕೊಂಡಿದ್ದಾರೆ. ಮನೆಯ ಕಿಟಕಿಗಳನ್ನು ಪುಡಿ ರೌಡಿ ಒಡೆದು ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆ ನಡೆಸುತ್ತಿದ್ದರೂ ಸ್ಥಳದಲ್ಲಿದ್ದವರು ಭಯದಿಂದ ತಡೆಯಲು ಮುಂದಾಗಿಲ್ಲ.

ತಮ್ಮೇಗೌಡರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಅಡ್ಡ ಮತದಾನ ಮಾಡಿದ್ದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಚಂದ್ರು ಲಮಾಣಿ

Spread the loveಗದಗ: ಪ್ರಾಮಾಣಿಕವಾಗಿ ಎನ್‌ಡಿಎಅಭ್ಯರ್ಥಿಗೆ ಮತ ಹಾಕಿದ್ದೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಮಾತ್ರವಲ್ಲ, ಯಾವುದೇ ದೇವರ ಮೇಲೆ ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ