Breaking News

38 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಎನ್‌ಸಿಬಿ

Spread the love

ಬೆಂಗಳೂರು: ವಿಶೇಷ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿದ್ದ ಭಾರೀ ಪ್ರಮಾಣದ ಡ್ರಗ್ಸ್‌ ಅನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ನಾಶಪಡಿಸಿದೆ.

ಮಾದಕ ವಸ್ತುಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ಎನ್‌ಸಿಬಿ 38 ಕೋಟಿ ಮೌಲ್ಯದ ಮಾದಕ ವಸ್ತುವನ್ನ ಜಪ್ತಿ ಮಾಡಿತ್ತು. ಇಂದು ಹೊಸಕೋಟೆ ಬಳಿಯ ಸೆಂಚುರಿ ರಿಫೈನರಿ ಘಟಕದಲ್ಲಿ 128 ಕೆ.ಜಿ. ಡ್ರಗ್ಸ್ ನಾಶ ಮಾಡಿದೆ.

ಹೈಡ್ರೋಗಾಂಜಾ, ಕೊಕೇನ್, ಮೆಥಾಂಪೈಟಮನ್ ಸೇರಿದಂತೆ ಒಟ್ಟು ಸುಮಾರು 38 ಕೋಟಿ ಮೌಲ್ಯದ ಹಲವು ಬಗೆಯ ಮಾದಕ ವಸ್ತುಗಳನ್ನ ಒಮ್ಮೆಲೆ ನಾಶಪಡಿಸಿದೆ.

ಕಳೆದ ಫೆಬ್ರುವರಿ 5 ರಂದು 11 ಕೋಟಿ ಮೌಲ್ಯದ 1,607 ಕೆಜಿ ಮಾದಕವಸ್ತುವನ್ನ ನಾಶ ಮಾಡಿತ್ತು ಎನ್‌ಸಿಬಿ. ಒಟ್ಟಾರೆ ಈ ವರ್ಷ 49 ಕೋಟಿ ಮೌಲ್ಯದ 1,735 ಕೆಜಿ ಡ್ರಗ್ಸ್ ನಾಶಪಡಿಸಿದೆ.


Spread the love

About Laxminews 24x7

Check Also

ಬೆಂಗ್ಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಸರಣಿ ಅಪಘಾತ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ನಗರದ ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ