Breaking News

ನನ್ನ ಮಗಳ ಹತ್ಯೆಯಲ್ಲಿ ಸಮೀರ್, ಆತನ ಕುಟುಂಬದ ಪಾತ್ರ ಇರಬಹುದು – ನೇಹಾ ಹಿರೇಮಠ್ ತಂದೆ ಶಂಕೆ

Spread the love

ಹುಬ್ಬಳ್ಳಿ: ನನ್ನ ಮಗಳ ಹತ್ಯೆಯಲ್ಲಿ ಅತ್ಯಾಚಾರ ಆರೋಪದಲ್ಲಿ ಅರೆಸ್ಟ್‌ ಆಗಿರುವ ಸಮೀರ್ r) ಮತ್ತು ಆತನ ತಂದೆ ಪಾತ್ರ ಇರಬಹುದು ಎಂದು ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ್  ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ, ನೇಹಾ ಹಂತಕ ಫಯಾಜ್‌ ಸಹ ಇದೇ ಜಿಮ್‍ನಲ್ಲಿ ತರಬೇತಿ ಪಡೆಯುತ್ತಿದ್ದ. ನನಗೆ ಸಮೀರ್‌ ತಂದೆ ಆಗಾಗ ಕರೆ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಅರ್ಥಿಕ ನೆರವು ನೀಡಿ ಎಂದು ಒತ್ತಾಯಿಸುತ್ತಿದ್ದರು. ಆಗಾಗ ತಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ಮನೆಯಲ್ಲಿ ನನ್ನ ಹೆಂಡತಿ ಬಿರಿಯಾನಿ ಮಾಡಿದ್ದಾರೆ. ಊಟಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದರು. ನಾನು ಜಂಗಮ ಸಮಾಜದ ವ್ಯಕ್ತಿ, ಮಾಂಸಾಹಾರ ಸೇವನೆ ಮಾಡುವುದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ನಾನು ಎಷ್ಟೇ ಕರೆದರು ಹೋಗಲಿಲ್ಲ, ಹೋಗಿದ್ದರೆ ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು? ನನ್ನ ಮಗಳ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು .

Spread the love ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು …….ಮುಗಿಯದ ಗೋವಿನ ಜೋಳ ಖರೀದಿ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ