Breaking News

ಕಾಂಗ್ರೆಸ್ ವಿದ್ಯಾರ್ಥಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ: ಚರಂತಿಮಠ

Spread the love

ಬಾಗಲಕೋಟೆ: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಎನ್.ಎಸ್.ಯುಐ ಕಾರ್ಯಕರ್ತರನ್ನ, ಹಿಂದೂ ಅಲ್ಲದ ಯುವಕರನ್ನ ಕೇಸರಿ ಶಾಲು ಹಾಕಿಸಿ ಶಿಕ್ಷಣ ಸಂಸ್ಥೆಗೆ ಕಳುಹಿಸಿ ವಿದ್ಯಾರ್ಥಿಗಳಿಗೆ ಧಮಕಿ ಹಾಕಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಗಂಭೀರ ಆರೋಪ ಮಾಡಿದ್ದಾರೆ.

ಉಪಚುನಾವಣೆ ರಣಕಣವಾಗಿ ಬದಲಾಗುತ್ತಿದ್ದು ಬಿಜೆಪಿಯು ವಿದ್ಯಾಗಿರಿ, ಜ್ಯೋತಿ ಕಾಲೋನಿ, ಬಿಟಿಡಿಎ ಭಾಗದಲ್ಲಿ ಮೆನೆ ಮನೆಗೆ ತೆರಳಿ, ಮನೆ ಸದಸ್ಯರಿಗೆ ಬಿಜೆಪಿಗೆ ಓಟ್ ಮಾಡುವಂತೆ ಮನವಿ ಮಾಡಿದರು.ಕೆಲ ಮನೆಗಳಲ್ಲಿ ಶಾಲು ಹೊದಿಸಿ, ಹಾರ ಹಾಕಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ 23ರಿಂದ ಪ್ರಚಾರ ನಡೆಯುತ್ತಿದೆ, ಜನರು ಬಹಳ ಉತ್ಸಾಹದಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಶಿಕ್ಷಣ ಸಂಸ್ಥೆಗೆ ತೆರಳಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಧಮಕಿ ಹಾಕಿಸುವ ಕೆಲಸ ಮಾಡಿದ್ದಾರೆ. ಅವರನ್ನು ನವನಗರ ಪೊಲೀಸ್ ಠಾಣೆಗೆ ಕರೆದೊಯ್ದರೆ,
ಅವರ ಮೇಲೆ ಕೇಸ್ ದಾಖಲು ಮಾಡಲು ಮೀನಾಮೇಶ ಎನಿಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷದ ನಾಯಕರುಗಳ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ಯಾಕೆ ಆಗುವುದಿಲ್ಲ, ಇಲ್ಲಿ ಕಾಂಗ್ರೆಸ್ ನಲ್ಲೇ ಕೆಲವು ನಾಯಕರ ಶಿಕ್ಷಣ ಸಂಸ್ಥೆಗಳು ಇವೆ ಎಂದರು.

ನಮ್ಮ ಕಾರ್ಯಕರ್ತರು ಹೋಗಿ ಪ್ರತಿಭಟನೆ ಮಾಡಿದಾಗ ಕೇಸ್ ದಾಖಲಿಸಿದ್ದಾರೆ. ೬ ಜನ್ರ ಮೇಲೆ ಕೇಸ್ ದಾಖಲಾಗಿದೆ. ಸಿಎಂ ಅವರು ತಮ್ಮ ಅಭ್ಯರ್ಥಿ ಸೋಲ್ತಾರೆ ಅನ್ನೋ ಭಯಕ್ಕೆ ಇಲ್ಲಿ ಬಂದು, ಇಡೀ ಮಂತ್ರಿಮಂಡಲವನ್ನ ಇಲ್ಲಿಗೆ ಕರೆಯಿಸಿ, ಹಣ ಹಂಚುವ ಕಲಸ ಮಾಡುತ್ತದ್ದಾರೆ. ಇಂದು ನಮ್ಮ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಮತ ಪ್ರಚಾರಲ್ಕೆ ಆಗಮಿಸಲಿದ್ದಾರೆ ನಮ್ಮ ಗೆಲುವು ನಿಶ್ವಿತ ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ