Breaking News

ಬಾದಾಮಿಗೆ ಕೈ ಕೊಟ್ಟು ಓಡಿ ಹೋದ ಸಿದ್ದರಾಮಯ್ಯ: ಆರ್.ಅಶೋಕ್ ವ್ಯಂಗ್ಯ

Spread the love

ಬಾಗಲಕೋಟೆ: ಸಿದ್ದರಾಮಯ್ಯ ಅವರ ನಿಜ ಬಣ್ಣ ಮೈಸೂರಿನಲ್ಲಿ ಗೊತ್ತಾಗಿ ಅಲ್ಲಿನ ಮತದಾರರು ಸೋಲಿಸಿದರು. ಆಗ ಬಾದಾಮಿಗೆ ಓಡಿ ಬಂದರು. ಬಾದಾಮಿ ಕೈ ಹಿಡಿಯಿತು. ಆದರೆ ಇಲ್ಲಿಗೂ ಕೈ ಕೊಟ್ಟು ಓಡಿ ಹೋದರು. ಈಗ ಮತ್ತೆ ಬಾಗಲಕೋಟೆಗೆ ಬಂದಿದ್ದಾರೆ. ಇಲ್ಲಿಗೂ ಕೈ ಕೊಡುತ್ತಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.
ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಗ ಚುನಾವಣೆಗೆ ಬಾದಾಮಿಗೆ ಬಂದಿದ್ದರು. ಈಗ ಮತ್ತೆ ಬಂದಿದ್ದಾರೆ. ಬಾದಾಮಿ ಹಾಲು ಕುಡಿದು, ಬಿರಿಯಾನಿ ತಿಂದು ಟಾಟಾ ಬಾಯ್ ಬಾಯ್ ಹೇಳಿದರು. ಇನ್ನು ಎರಡು ವರ್ಷದಲ್ಲಿ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಅಂತ ಅವರು ಹೇಳುತ್ತಿದ್ದಾರೆ. ಮೂರು ವರ್ಷ ನಿಮ್ಮದೇ ಶಾಸಕರು ಬಾಗಲಕೋಟದಲ್ಲಿ ಇದ್ದರಲ್ಲ. ಆಗ ನಿಮ್ಮ ಶಿಷ್ಯ ಏನು ಅಭಿವೃದ್ಧಿ ಮಾಡಿದ್ರು ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಈ ಹಿಂದೆ ಚರಂತಿಮಠ ಅವರ ಅಭಿವೃದ್ಧಿ ಕಾರ್ಯ ಜನರ ಮನಸ್ಸಲ್ಲಿ ಉಳಿದಿದೆ. ಆದ್ದರಿಂದ ಈ ಬಾರಿ ಜನರು ಅವರನ್ನು ಗೆಲ್ಲಿಸಲಿದ್ದಾರೆ ಎಂದರು.
ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಪಟ್ಟಕ್ಕಾಗಿ ಗುದ್ದಾಟ ನಡೆದಿದೆ. ಮೂರು ವರ್ಷದಲ್ಲಿ 30 ಹಗರಣಗಳನ್ನು ಮಾಡಿದರು. ವಾಲ್ಮೀಕಿ ಹಗರಣದಿಂದ ಹಿಡಿದು ಗುತ್ತಿಗೆದಾರರ ಅರವತ್ತು ಪಸೆರ್ಂಟ್ ಕಮಿಷನ್ ಹಗರಣದವರೆಗೆ ನಡೆಯತ್ತಿವೆ. ಲಿಕ್ಕರ್ ಲಾಬಿ ಮಾಡಿ ಸಚಿವರೊಬ್ಬರು ಕೋಟಿ ಕೋಟಿ ಹಣ ಹೊಡೆದು ದೆಹಲಿಗೆ ಕಳಿಸಿದರು. ಮೂರು ವರ್ಷದಲ್ಲಿ ಯಾವುದೇ ಸಾಧನೆ ಮಾಡಲಿಲ್ಲ. ನೀರಾವರಿಗೆ ಹಣ ಇಡಲಿಲ್ಲ. ಆದರೆ ಕಾಂಗ್ರೆಸ್‍ನವರು ಮಾತ್ರ ಹಣ ಮಾಡಿಕೊಳ್ಳುತ್ತಿದ್ದಾರೆ. ಒಂದು ಡ್ಯಾಮ್ ಕಟ್ಟಲಿಲ್ಲ. ಮೆಡಿಕಲ್ ಕಾಲೇಜು ತರಲಿಲ್ಲ ಎಂದರು.
ಕಾಂಗ್ರೆಸ್ ಬಂದ ಮೇಲೆ ಒಂದೇ ಒಂದು ಪಿ.ಎಚ್.ಸಿಗಳಲ್ಲಿ ವೈದ್ಯರಿಲ್ಲ. ಔಷಧ ಖರೀದಿಗೆ ಹಣವಿಲ್ಲ. ಹಣವಿಲ್ಲದೆ ಮೂರು ವರ್ಷದಲ್ಲಿ ಟೆಂಡರ್ ಕರೆದಿಲ್ಲ. ಅಭಿವೃದ್ಧಿಗೆ ಮಾಡಿದ ಸಾಲವೇ ಜಾಸ್ತಿ. ಸಾಲ ತಗೊಂಡು ಮಜವಾದಿ ರಾಮಯ್ಯ ಆದರು. ಸಣ್ಣ ಸಣ್ಣ ಸಮುದಾಯಗಳ ಬಳಿ ಹೋಗಿ ಈಗ ಮತ ಕೇಳುತ್ತಿದ್ದಾರೆ. 20 ನೇ ತಾರೀಕಿನ ನಂತರ ಇವರ ಕಥೆ ಏನು ಆಗುತ್ತದೋ ಗೊತ್ತಿಲ್ಲ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಿಎಂ ಸ್ಥಾನವನ್ನು ಒದ್ದು ಕಿತ್ತುಕೋತಾರೆ ಎಂದು ವಿವರಿಸಿದರು.
ಎಸ್.ಟಿ.ಮುಖಂಡನನ್ನು ಸಿಎಂ ಮಾಡ್ತಿನಿ ಅಂತ ಸಿದ್ದರಾಮಯ್ಯ ಅವರು ಒಂದು ದಿನ ಹೇಳಿಲ್ಲ. ಮುಂದೆ ಹೇಳಲ್ಲ. ಏಕೆಂದರೆ ಅವರ ಸ್ಥಾನವೇ ಗ್ಯಾರಂಟಿ ಇಲ್ಲ. ಮುಖ್ಯಮಂತ್ರಿಯಾಗಲು ಪರಮೇಶ್ವರ್ ಅವರು ಕಾಯುತ್ತಿದ್ದಾರೆ. ಆದರೆ ಅವರ ಭಾಗ್ಯದ ಬಾಗಿಲು ತೆರೆಯುವುದೇ ಡೌಟು ಎಂದರು.
ಸಿದ್ದರಾಮಯ್ಯ ಅವರದು ರೈತ ವಿರೋಧಿ ಸರ್ಕಾರ. ನೀರಾವರಿಗೆ ಹಣವೇ ಬಿಡುಗಡೆ ಮಾಡಿಲ್ಲ. ಆದರೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಸಾಕಷ್ಟು ಹಣವನ್ನು ನೀರಾವರಿಗೆ ಬಿಡುಗಡೆ ಮಾಡಿತ್ತು ಎಂದು ನುಡಿದರು. ರಾಜ್ಯದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ನವರುt ವಯನಾಡಿಗೆ ಕೊಡ್ತಾರೆ. ಗ್ಯಾರಂಟಿಯಿಂದ ರೈತರು ಉದ್ದಾರ ಆಗಿದ್ದರೆ ಅವರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇದೊಂದು ದರೋಡೆ ಸರ್ಕಾರ. ದಲಿತರ 53 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ನಿಯತ್ತಾಗಿ ಹೈಕಮಾಂಡ್‍ಗೆ ತಿಂಗಳು ತಿಂಗಳು ಹಣವನ್ನು ಕಳುಹಿಸಿ ರಾಜ್ಯದ ಸಾಲದ ಹೊರೆ ಏರಿಸಿದ್ದಾರೆ. ರಾಜ್ಯವನ್ನು ಅಧೋಗತಿಗೆ ತಳ್ಳಿದ್ದಾರೆ ಎಂದರು.


Spread the love

About Laxminews 24x7

Check Also

ಚರಂತಿಮಠರಿಗೆ ಮತ ನೀಡಿ ಅಭಿವೃದ್ಧಿಗೆ ಕೈಜೋಡಿಸಿ: ಆರ್.ಅಶೋಕ, ಬಸವರಾಜ ಬೊಮ್ಮಾಯಿ ಮನವಿ

Spread the loveಬಾಗಲಕೋಟೆ: ಅಭಿವೃದ್ಧಿ ಮಾಡಿದವರಿಗೆ ಜನರು ಮತ ನೀಡಬೇಕು. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ