Breaking News

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

Spread the love

ಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದಾಗ ಸಿಡಿಲು  ಬಡಿದು ಯುವರೈತ  ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ.

ರಾಹುಲ್ ಭಾಸ್ಕರ್ (25) ಸಿಡಿಲಿಗೆ ಬಲಿಯಾದ ಯುವರೈತ. ಕೆಲಸದ ನಿಮಿತ್ತ ರಾಹುಲ್ ತಮ್ಮ ಜಮೀನಿಗೆ ತೆರಳಿದ್ದ ವೇಳೆ ಏಕಾಏಕಿ ಸಿಡಿಲು ಸಹಿತ ಮಳೆ ಆರಂಭವಾಗಿ ಜಮೀನಿನಲ್ಲಿದ್ದ ರಾಹುಲ್‌ಗೆ ಸಿಡಿಲು ಬಡಿದು ದುರಂತ ಸಂಭವಿಸಿದೆ.

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕನ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ. ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಮುಂಜಾನೆ ಹಲವೆಡೆ ಮಳೆಯಾಗಿದೆ. ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 


Spread the love

About Laxminews 24x7

Check Also

ತೈಲ ಅಭಾವ – ಬೀದರ್‌ನಲ್ಲಿ 7ಕ್ಕೂ ಅಧಿಕ ಪೆಟ್ರೋಲ್ ಬಂಕ್ ಕ್ಲೋಸ್

Spread the loveಬೀದರ್: ಇರಾನ್ ಮತ್ತು ಇಸ್ರೆಲ್ ವಾರ್ ಯುದ್ಧದ ಪರಿಣಾಮ ಗಡಿ ಜಿಲ್ಲೆ ಬೀದರ್‌ನ  ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ