Breaking News

ಅಕ್ರಮ ಸಂಬಂಧ : ಮಹಿಳೆಯನ್ನು ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ…

Spread the love

ಹೈದರಾಬಾದ್‌: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನೌಕಾಪಡೆಯ ಉದ್ಯೋಗಿ, ಆಕೆಯನ್ನು ಕೊಂದು, ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಕೃತ್ಯ ನಡೆದಿದೆ.

ವಿಜಯನಗರ ಜಿಲ್ಲೆಯ ಮೂಲದ ಆರೋಪಿ ರವೀಂದ್ರ ವಿವಾಹಿತ ಮಹಿಳೆಯನ್ನ ಕೊಂದು ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದಾನೆ (Fridge) ಎಂದು ತಿಳಿದುಬಂದಿದೆ. ಆರೋಪಿ ರವೀಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಗೊತ್ತಾಗಿದೆ.

ಇತ್ತೀಚಿಗೆ ಆರೋಪಿ ರವೀಂದ್ರನ ಪತ್ನಿ ತವರು ಮನೆ ಸೇರಿದ್ದರಿಂದ ಮೌನಿಕಾ (28) ಎಂಬ ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದ. ಇತ್ತೀಚೆಗೆ, ಮೌನಿಕಾ ಹಣಕ್ಕಾಗಿ ಒತ್ತಡ ಹೇರಲು ಶುರು ಮಾಡಿದ್ದಾಳೆ. ರವೀಂದ್ರನ ಪತ್ನಿ ಕೂಡ ಊರಲ್ಲಿ ಇಲ್ಲದಿದ್ದ ಕಾರಣ ಮೌನಿಕಾಳನ್ನು ಮನೆಗೆ ಕರೆದಿದ್ದಾನೆ. ಇವರಿಬ್ಬರ ಭೇಟಿ ವೇಳೆ ವಾಗ್ವಾದ ನಡೆದು ರವೀಂದ್ರ ಮೌನಿಕಾಳನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಬಳಿಕ ಆಕೆಯ ದೇಹವನ್ನ ಕತ್ತರಿಸಿ, ಅರ್ಧ ಭಾಗವನ್ನ ಫ್ರಿಡ್ಜ್‌ನಲ್ಲಿ ಇನ್ನುಳಿದ ಅರ್ಧವನ್ನು 1 ಬಂಡಲ್‌ನಲ್ಲಿ ಸುತ್ತಿ ಮನೆಯ ಒಂದು ಮೂಲೆಯಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ


Spread the love

About Laxminews 24x7

Check Also

15 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಎಂಬಿ ಪಾಟೀಲ್

Spread the loveಬಾಗಲಕೋಟೆ: ಮುಂದಿನ ಹದಿನೈದು ದಿನಗಳ ಒಳಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ