Breaking News

ಕಮಲ ಅರಳಿಸಲು ಕಂಕಣಬದ್ದರಾಗಿ: ಗದ್ದಿಗೌಡರ್

Spread the love

ಬಾಗಲಕೋಟೆ: ಕ್ಚೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಗತಿಪರವಾದ ಬಿಜೆಪಿಯನ್ನು ಗೆಲ್ಲಿಸಿ. ಮೊಸಳೆ ಕಣ್ಣೀರು ಸುರಿಸಿ ಬಡವರ ಬದುಕನ್ನು ಬೀದಿಗೆ ತರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿ ಎಂದು ಸಂಸದರಾದ ಪಿ.ಸಿ ಗದ್ದಿಗೌಡರ್ ಹೇಳಿದರು.

ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ ವೀರಣ್ಣ ಚರಂತಿಮಠ ಅವರ ಪರವಾಗಿ ಗುಂಡುನಪಲ್ಲೆ, ಮಲ್ಲಾಪೂರ, ಬೇವಿನಮಟ್ಟಿ, ನೀರಲಕೇರಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದ ಅವರು ಮೂರು ವರ್ಷಗಳ ಹುಸಿ ಭರವಸೆಗಳಿಂದ ಸೋತು ಹೋದ ಮತದಾರರ ಏಳಿಗೆಗೆ ಉಪಚುನಾವಣೆಯಲ್ಲಿ ಕಮಲಕ್ಕೆ ಮತ ನೀಡಿ. ದೇಶದ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಲು ವೀರಣ್ಣ ಚರಂತಿಮಠ ಅವರ ಗೆಲುವು ಅವಶ್ಯಕ. ​ಗ್ರಾಮಸ್ಥರ ಅಭೂತಪೂರ್ವ ಬೆಂಬಲ ಮತ್ತು ಬಿಜೆಪಿಯ ಮೇಲಿಟ್ಟಿರುವ ನಂಬಿಕೆಯು ನಮ್ಮ ಗೆಲುವಿನ ಸಂಕೇತವಾಗಿದೆ ಎಂದರು.
ಮತಯಾಚನೆಯಲ್ಲಿ ಬಿಜೆಪಿ ಮುಖಂಡರಾದ ದೇವರಾಜ ಪಾಟೀಲ್, ಜಿ.ಎನ್ ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ