ವಿಧಾನ ಸೌಧ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ನಡುವೆ ನಡೆದ ಸಮನ್ವಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದು ಕೊಂಡು ನಿರ್ವಹಿಸಿದಾಗೆ ಈಗ ಯುದ್ದ ನಡೆಯುತ್ತಿರುವ ಪರಿಸ್ಥಿತಿಯನ್ನು ನಾವು ಎದುರಿಸಲು ಬದ್ದರಾಗಿದ್ದು ಯಾವುದೇ ಆತಂಕ ಪಡುವಾಗಿಲ್ಲಾ ಎಂದರು
ರಾಜ್ಯದಲ್ಲಿ ಅಡಿಗೆ ಅನಿಲ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬೇಕಾಗುವಷ್ಟು ಅಡಿಗೆ ಅನಿಲವನ್ನು ಪೂರೈಸಲಿದ್ದು ನಾಗರಿಕರು ಆತಂಕ ಪಡುವಂತಿಲ್ಲ ಎಂಬುದಾಗಿ ವಿವರಿಸಿದರು
ಸಚಿವರು ಮಾತನಾಡಿ ಹಾಗೆಯೇ ಹೊಟೆಲ್ ಗಳಿಗೆ ನೀಡುತ್ತಿರುವ 20% ರಷ್ಟು ಅಡಿಗೆ ಅನಿಲ ನೀಡುತ್ತಿದ್ದು ಇನ್ನೂ 20% ರಷ್ಟು ಹೆಚ್ಚಿಸಲು ಮಾನ್ಯ ಸಚಿವರು ಸಭೆಯಲ್ಲಿ ಒತ್ತಾಯಿಸಿದರು
ಸೋಲಾರ್ ಇಂಧನ ಹಾಗೂ ಭಯೊ ಅನಿಲ ಉತ್ಪಾದನೆ ಗೆ ಹೆಚ್ವಿನ ಒತ್ತು ನೀಡಿದ್ದಲ್ಲಿ ಆಯಾ ರಾಜ್ಯಗಳೆ ಹೆಚ್ವಿನ ಇಂಧನ ಉತ್ಪಾದನೆಗೆ ಸಹಕಾರಿಯಾಗಲಿದ್ದು ಇದರ ಕುರಿತು ಕ್ರಮವಹಿಸಲು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀಮತಿ ಶಾಲನಿ ರಜನೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7