Breaking News

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

Spread the love

ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್‌  ಮಾಹಿತಿ ನೀಡಿದೆ

ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಿದೆ. 

ಈ ಮೊದಲು ಮಾ.31ಕ್ಕೆ ರಜೆಯಿದ್ದ ಹಿನ್ನೆಲೆ ಮಾ.30ಕ್ಕೆ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸರ್ಕಾರ ಪರಿಷ್ಕರಣೆ ಮಾಡಿ, ಮಾ.31ರ ರಜೆಯನ್ನು ಮಾ.30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ.31ಕ್ಕೆ ನಡೆಸಲು ತೀರ್ಮಾನಿಸಿದೆ.

`ಪಬ್ಲಿಕ್ ಟಿವಿ’ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದ್ದು, ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಪರೀಕ್ಷೆಯನ್ನು ಒಂದು ದಿನ ಮುಂದೂಡಿಕೆ ಮಾಡಲಾಗಿದೆ. ಮಾ.30ಕ್ಕೆ ಮಹಾವೀರ ಜಯಂತಿ ರಜೆ ಹಾಗೂ ಮಾ.31ಕ್ಕೆ ಹಿಂದಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ


Spread the love

About Laxminews 24x7

Check Also

ರಾಜ್ಯದಲ್ಲಿ ಮುಂದುವರಿದ ಆಲಿಕಲ್ಲು ಮಳೆಯಬ್ಬರ

Spread the loveಬೆಂಗಳೂರು: ರಾಜ್ಯದ ಹಲವೆಡೆ ಇಂದೂ ಕೂಡ ಆಲಿಕಲ್ಲು ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಸುರಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ