Breaking News

ಜಿಲ್ಲೆಯಾದ್ಯಂತ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಸಮಸ್ಯೆ ಇಲ್ಲ

Spread the love

ಜಿಲ್ಲೆಯಾದ್ಯಂತ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ (ಗ್ಯಾಸ್ ಸಿಲೆಂಡರ್) ಸಮಸ್ಯೆ ಇಲ್ಲ. ಮನೆ, ಅಂಗಡಿಯಲ್ಲಿ ಅಕ್ರಮವಾಗಿ ಪೆಟ್ರೋಲ್ ಸಂಗ್ರಹಿಸಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮ ರೋಷನ್ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡಿಸೆಲ್, ಸಿಲೆಂಡರ್ ಅಭಾವ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಏನೇ ಸಮಸ್ಯೆ ಉದ್ಬವಿಸಿದರೇ ತಕ್ಷಣವೇ  ಜಿಲ್ಲಾಡಳಿತ, ತಾಲೂಕು ತಹೀಸಲ್ದಾರ, ಪೊಲೀಸ್ ಠಾಣೆಗೆ  ಮಾಹಿತಿ ನೀಡಿ ಎಂದು ವಿನಂತಿಸಿಕೊಂಡರು.
ಸದ್ಯ ಬೆಳಗಾವಿ ನಗರದಲ್ಲಿ  50 ಸೇರಿ ಜಿಲ್ಲೆಯಾದ್ಯಂತ 560 ಪೆಟ್ರೋಲ್, ಡಿಸೆಲ್ ಬಂಕ್ ಕಾರ್ಯನಿರ್ವಹಿಸುತ್ತಿವೆ.ಸಾಮಾನ್ಯ ದಿನದಲ್ಲಿ 1.36 ಲಕ್ಷ ಲೀಟರ್ ಪೆಟ್ರೋಲ್, ಡಿಸೆಲ್ ಮಾರಾಟವಾಗುತ್ತಿದೆ. ಆದರೆ, ವದಂತಿ ಹಿನ್ನೆಲೆ ಎರಡು ದಿನದಲ್ಲಿ 2.69ಲಕ್ಷ ಲೀಟರ್ ಮಾರಾಟವಾಗಿದೆ. ಹೀಗಾಗಿ ಎಲ್ಲ ಬಂಕ್‌ಗಳಲ್ಲಿ ಸಂಗ್ರಹವಿದ್ದ ಪೆಟ್ರೋಲ್, ಡಿಸೆಲ್ ಖಾಲಿಯಾಗಿದ್ದರಿಂದ ಸಮಸ್ಯೆ ಉದ್ಬವಿಸಿರಬಹುದು. ಆದರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ತೈಲ ಸಂಗ್ರಹ ಡಿಪೋದಿಂದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.  ಒಂದು ತಿಂಗಳವರೆಗೆ ಸಾಕಾಗುಷ್ಟು ಸಂಗ್ರಹವಿದೆ. ಬಂಕ್ ಮಾಲೀಕರು ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕಬೇಕು. ಬಾಟಲ್, ಕ್ಯಾನ್‌ಗಳಲ್ಲಿ ಪೆಟ್ರೋಲ್ ಹಾಕಿದರೆ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.
ಸಿಲಿಂಡರ್ ಪೂರೈಕೆ ಸಮಸ್ಯೆ ಇಲ್ಲ:
ಬೆಳಗಾವಿ ನಗರ, ಜಿಲ್ಲೆಯ್ಯದ್ಯಂತ ವಾಣಿಜ್ಯ, ಗೃಹಬಳಕೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ. ಸಾಮಾನ್ಯ ದಿನದಲ್ಲಿ 20ರಿಂದ 25 ಸಾವಿರ ವರೆಗೆ ಸಿಲಿಂಡರ್ ಪೂರೈಕೆ ಮಾಡಲಾಗುತಿತ್ತು. ಇದೀಗ ಸಿಲಿಂಡರ್ ಮೇಲೆ ನಿಯಂತ್ರಣಕ್ಕಾಗಿ ಪೂರೈಕೆ ಪ್ರಮಾಣದಲ್ಲಿ ಕಡಿಮೆ ಮಾಡಿ ದಿನಕ್ಕೆ 20 ಸಾವಿರ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. ಕೇವಲ ಒಂದೇ ವಾರದಲ್ಲಿ 35 ಸಾವಿರ ಗ್ಯಾಸ್ ಬುಕ್ಕಿಂಗ್ ಆಗಿವೆ.  ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ಆದರೆ, ಹೆಚ್ಚುವರಿಯಾಗಿ ಬುಕ್ಕಿಂಗ್ ಮಾಡುವವರಿಗೆ ಗ್ಯಾಸ್ ನೀಡುವುದಿಲ್ಲ ಎಂದರು.
ಸಾಮಾನ್ಯ ದಿನದಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ನಿತ್ಯ 1,600 ವಾಣಿಜ್ಯ ಸಿಲಿಂಡರ್ ಪೂರೈಸಲಾಗುತಿತ್ತು. ಇದೀಗ ಬೇಡಿಕೆಗೆ ಅನುಗುಣವಾಗಿ ದಿನಕ್ಕೆ 600 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಬಳಿಕ ಹೋಟೆಲ್, ದಾಬಾ, ಇತರೆ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಗ್ಯಾಸ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿತರಕರು, ಹೋಟೆಲ್ ಮಾಲೀಕರು, ಅಧಿಕಾರಿಗಳು  ಒಳಗೊಂಡಿರುವ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಮೂಲಕವೇ ಎಲ್ಲ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಿಲ್ಲಾ ಉಪನಿರ್ದೇಶನ ಮಲ್ಲಿಕಾರ್ಜುನ್ ನಾಯಕ ಇದ್ದರು.

Spread the love

About Laxminews 24x7

Check Also

ಚಿನ್ನದ ವ್ಯಾಪಾರಿಗಳ ಅನಗತ್ಯ ತೊಂದರೆಗೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ

Spread the loveಬೆಳಗಾವಿ: ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಲೋಕೋಪಯೋಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ