Breaking News

ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ನಿಂತ ಸತೀಶ್‌ & ಅಭಯ್

Spread the love

ಬೆಳಗಾವಿ: ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ಮಂಗಳವಾರ ದೈವಜ್ಞ ಜ್ಯುವೆಲರ್ಸ್ ನ ಅಸೋಸಿಯೇಷನ್ ನಿಂದ ಆಯೋಜಿಸಿದ್ದ ಸುವರ್ಣ ಸಮ್ಮೇಳನ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಶಾಸಕ ಅಭಯ್‌ ಪಾಟೀಲ ಈ ಇಬ್ಬರು ರಾಜಕೀಯ ಬದ್ಧ ವೈರಿಗಳು ಅಕ್ಕ-ಪಕ್ಕ ನಿಂತು ಗಮನ ಸೆಳೆದರು.
ಹೌದು… ಇಂದು ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಭಯ್‌ ಪಾಟೀಲ ಅಕ್ಕ-ಪಕ್ಕದಲ್ಲಿ ನಿಂತರೂ ಈ ಇಬ್ಬರು ಒಬ್ಬರಿಗೊಬ್ಬರು ಹೆಚ್ಚೇನು ಮಾತನಾಡಲಿಲ್ಲ. ಈ ಇಬ್ಬರು ರಾಜಕೀಯ ವಿರೋಧಿಗಳು ಒಟ್ಟಾಗಿ ನಿಂತಿದ್ದನ್ನು ಕಂಡು ಚಿನ್ನದ ವ್ಯಾಪಾರಿಗಳು ಆಶ್ಚರ್ಯಗೊಂಡರು.
ರಾಜಕೀಯದಲ್ಲಿ ನಿಲ್ಲದ ಈ ಇಬ್ಬರು ಟಾಕ್‌ ಫೈಟ್‌: ಬೆಳಗಾವಿ ರಾಜಕಾರಣದಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿಯ ಅಭಯ ಪಾಟೀಲ್ ದೀರ್ಘಕಾಲದ ರಾಜಕೀಯ ಎದುರಾಳಿಗಳಾಗಿದ್ದು, ಇವರಿಬ್ಬರ ನಡುವಿನ “ಬಿಗ್ ಫೈಟ್” ಪದೇ ಪದೆ ಸುದ್ದಿಯಾಗುತ್ತಲೇ ಇರುತ್ತದೆ. ಅಭಯ ಪಾಟೀಲ್ ಅವರು ಸತೀಶ್ ಜಾರಕಿಹೊಳಿಯವರ ಆಡಳಿತ ಮತ್ತು ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಾ ಸಾಗಿದರೆ, ಸಚಿವ ಸತೀಶ್‌ ಜಾರಕಿಹೊಳಿ ಅವರು ಹಿಂದೆ ಸ್ಮಾಟ್ ಸಿಟಿ ಕಾಮಗಾರಿ ಹಾಗೂ ತಿನಿಸು ಕಟ್ಟೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದಲ್ಲದೇ ಹಿಂದೆ ವಾತಾವರಣ ಶುದ್ಧಿಗಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹೋಮ ಹವನ ನಡೆಸಿದ್ದರು. ಇದರಿಂದಾಗಿ ಅಭಯ ಪಾಟೀಲ ಕಾರ್ಯವೈಖರಿಗೆ ಕೆಲವು ಸಹಮತ ಸೂಚಿಸಿದ್ದರೆ, ಇನ್ನು ಕೆಲವರು ಇದು ಮೂಢನಂಬಿಕೆಯ ಪರಮಾವಧಿ ಎಂದಿದ್ದರು. ಅಭಯ ಪಾಟೀಲವರು ಒಬ್ಬ ಶಾಸಕರಾಗಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು ಈ ತರದ ಮೂಢನಂಬಿಕೆಯನ್ನಲ್ಲ ಎಂದು ಸತೀಶ್ ಹೇಳಿದ್ದರು. ಇದೇ ರೀತಿ ಈ ಇಬ್ಬರು ನಡುವೆ ಸಾಕಷ್ಟು ಆರೋಪ ಪ್ರತ್ಯಾರೋಪಗಳು ನಡೆಯುತ್ತಾಲೇ ಬಂದಿದೆ. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರು ರಾಜಕೀಯ ಬದ್ಧ ವೈರಿಗಳು ಒಟ್ಟಿಗೆ ಪಾಲ್ಗೊಂಡಿದ್ದು ಅಪರೂಪವಾಗದಂತೂ ಸತ್ಯ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ