Breaking News

ಸೂಕ್ತ ಸಂಗಾತಿ ಆಯ್ಕೆ ದಾಂಪತ್ಯ ಬುದಕಿಗೆ ಮುಖ್ಯ

Spread the love

ಬೆಳಗಾವಿ: ದಾಂಪತ್ಯ ಜೀವನ ಬುದಕಿಗೆ ಬಹುದೊಡ್ಡದು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳಲ್ಲಿ ಬಹು ಮುಖ್ಯವೆನಿಸಿದೆ. ಇವುಗಳನ್ನು ಈಡೇರಿಸಿಕೊಳ್ಳುವುದು ಜೀವನದ ಕರ್ತವ್ಯವೆನಿಸಿದೆ. ಹಾಗಾಗಿ  ಸೂಕ್ತ ಸಂಗಾತಿ ಆಯ್ಕೆ ಬಹು ಮುಖ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ.ಮಾನ್ವಿ ಹೇಳಿದರು.
ನಗರದ ಜೆಎನ್‌ಎಂಸಿ ಜೀರಿಗೆ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರ ಹಾಗೂ ಕೆಎಲ್ಇ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಧು-ವರ ಪಾಲಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ಬೇರೆಬೇರೆ ಊರುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ಮಕ್ಕಳಿಗೆ ಕಂಕಣ ಭಾಗ್ಯ ದೊರೆಯುವುದು ಕಷ್ಟವಾಗುತ್ತಿದೆ. ಇಂತಹ  ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕ ಒಂದೇ ಸೂರಿನಡಿ ಸಮಾವೇಶಗಳನ್ನು ಆಯೋಜಿಸಿ ಅನುಕೂಲ ಕಲ್ಪಿಸಿದೆ. ಇದರಿಂದ ಬಾಳ ಸಂಗಾತಿ ಆಯ್ಕೆ ಮತ್ತಷ್ಟು ಸುಲಭವಾಗಿದೆ. ಇದಕ್ಕೆ ಡಾ.ಪ್ರಭಾಕರ ಕೋರೆ ಕೊಡುಗೆ ಬಹುದೊಡ್ಡದು ಎಂದು ಸ್ಮರಿಸಿದರು.
ಹಿರಿಯ ವಕೀಲ ಎಂ.ಬಿ.ಝಿರಲಿ ಮಾತನಾಡಿ, ಕುಟುಂಬ ವ್ಯವಸ್ಥೆ ಅತಂತ್ರವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು  ಗಟ್ಟಿಗೊಳಿಸುವ ಕೆಲಸವನ್ನು ಮಹಾಸಭೆ ಹಾಗೂ ಕೆಎಲ್ಎ ನಿರಂತರವಾಗಿ ಮಾಡುತ್ತಾ ಬಂದಿದೆ. ಡಾ.ಕೋರೆಯವರು ಕಾರ್ಯಾಧ್ಯಕ್ಷರಾದಾಗಿನಿಂದಲೂ ವಧು-ವರ ಸಮ್ಮೇಳನಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವಧು-ವರ ಅನ್ವೇಷಣ ಕೇಂದ್ರವು ಯಾವುದೇ ಲಾಭ ಪಡೆದುಕೊಳ್ಳದೆ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಡಾ.ಗುರುದೇವಿ ಹುಲೇಪ್ಪನವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬಾಳೆಕುಂದ್ರಿ, ಬಾಲಚಂದ್ರ ಭಾಗಿ, ಸೋಮಶೇಖರ ಚೊನ್ನದ, ಸರೋಜಿನಿ ನಿಶಾನ್ದಾರ, ಜ್ಯೋತಿ ಬಾದಾಮಿ, ಆರ್.ಪಿ.ಪಾಟೀಲ, ಎಂ.ವೈ.ಮೆಣಸಿನಕಾಯಿ ಇತರರಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ