Breaking News

ಗದಗ: ರಥೋತ್ಸವದ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ದಾರಿ ಬಿಡುವಂತೆ ಹೇಳಿದ್ದಕ್ಕೆ ಹಲ್ಲೆ? ಸಲೀಂ ಗ್ಯಾಂಗ್ ಅರೆಸ್ಟ್!

Spread the love

ಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಘಟನೆ ನಡೆದಿದ್ದು ಹೇಗೆ?

ಗದಗ ಜಿಲ್ಲೆಯ ಮಲ್ಲಸಮುದ್ರ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ರಥೋತ್ಸವದ ಸಂಭ್ರಮದ ನಡುವೆಯೇ ಕಿರಿಕ್ ನಡೆದಿದ್ದು, ಕಾರು ತೆರವುಗೊಳಿಸುವ ವಿಚಾರವಾಗಿ ಆರಂಭವಾದ ಜಗಳ ಹಲ್ಲೆಯಲ್ಲಿ ಅಂತ್ಯವಾಗಿದೆ.

ಇದನ್ನು ಕಂಡ ಜಾತ್ರಾ ಕಮಿಟಿಯ ಯುವಕರು, ರಥ ಬರಲು ದಾರಿ ಮಾಡಿಕೊಡುವಂತೆ ಮತ್ತು ಕಾರನ್ನು ಪಕ್ಕಕ್ಕೆ ಸರಿಸುವಂತೆ ವಿನಂತಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಕಾರು ಸರಿಸಲು ನಿರಾಕರಿಸಿದ ಸಲೀಂ ತಂಡದವರು, ಜಾತ್ರಾ ಕಮಿಟಿಯ ಸದಸ್ಯರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಥೋತ್ಸವದಂತಹ ದೇವರ ಆಚರಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಮತ್ತು ಕಮಿಟಿಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

ಜಾತ್ರಾ ಕಮಿಟಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಕಿಡಿಗೇಡಿಗಳು

  • ಸಲೀಂ ಬಡೇಖಾನ್
  • ಲೋಕೇಶ್ ರಾಮಜಿ
  • ಮಂಜುನಾಥ್ ಹಾದಿಮನಿ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಧಾರ್ಮಿಕ ಮೆರವಣಿಗೆಗಳ ವೇಳೆ ಸಂಯಮ ಮತ್ತು ಪರಸ್ಪರ ಗೌರವ ಬಹಳ ಮುಖ್ಯ. ಪೊಲೀಸರ ಈ ತ್ವರಿತ ಕ್ರಮದಿಂದ ಹೆಚ್ಚಿನ ಅಹಿತಕರ ಘಟನೆಗಳು ತಪ್ಪಿದಂತಾಗಿದೆ.


Spread the love

About Laxminews 24x7

Check Also

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ, ಶೈಕ್ಷಣಿಕ ಸಮಾವೇಶ

Spread the loveಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಘಟಕ, ಗದಗ ಜಿಲ್ಲಾ ಘಟಕ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ