Breaking News

ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ತೆರೆ

Spread the love

ಗದಗ: ಐತಿಹಾಸಿಕ ಸ್ಥಳ ಗದಗ  ಜಿಲ್ಲೆ ಲಕ್ಕುಂಡಿಯಲ್ಲಿ ನಡೆಯುತ್ತಿದ್ದ ಉತ್ಖನನ ಕಾಮಗಾರಿಗೆ ಇಂದು ತೆರೆ ಬಿದ್ದಿದೆ. ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ 47 ದಿನಗಳವರೆಗೆ ನಡೆದ ಉತ್ಖನನ  ಇಂದು ಮುಕ್ತಾಯವಾಗಿದೆ.

ಜನವರಿ 10ರಂದು ಲಕ್ಕುಂಡಿ ರಿತ್ತಿ ಕುಟುಂಬಕ್ಕೆ ನಿಧಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಜನವರಿ 16ರಿಂದ ಉತ್ಖನನ ಕಾರ್ಯ ಆರಂಭ ಮಾಡಲಾಗಿತ್ತು. 35 ಜನ ಕಾರ್ಮಿಕರೊಂದಿಗೆ 47 ದಿನಗಳ ಕಾಲ ಉತ್ಖನನ ಕಾಮಗಾರಿ ನಡೆಯಿತು. 10*10 ಮೀಟರ್ ಸುತ್ತಳತೆ ಹಾಗೂ ಸುಮಾರು 14 ಅಡಿ ಆಳಕ್ಕೆ ಗುಂಡಿ ಅಗೆಯಲಾಗಿದೆ.

ಯಾವುದೇ ಬಂಗಾರದ ನಿಧಿ, ಅಮೂಲ್ಯವಾದ ಆಭರಣಗಳು ದೊರೆಯಲಿಲ್ಲ. ಆದರೆ ಉತ್ಖನನ ವೇಳೆ 50ಕ್ಕೂ ಅಧಿಕ ಪ್ರಾಚ್ಯಾವಶೇಷಗಳಾದ ಶಿವಲಿಂಗ, ಪಾಣಿಪೀಠ, ನಾಗರ ಶಿಲೆಗಳು, ಟರ‍್ರಾಕೋಟ ಬಿಲ್ಲೆ, ಲೋಹಗಳು, ಮೂಳೆ ತುಣುಕುಗಳು, ಪಚ್ಚೆ ಕಲ್ಲು, ಹವಳ, ಕವಡೆ, ನಾಗಮಣಿ, ಮಡಿಕೆ ಚೂರುಗಳು, ಪ್ರಾಚೀನ ಕಾಲದ ಆಯುಧಗಳು, ವಿವಿಧ ರೀತಿಯ ವಿಗ್ರಹಗಳು ಸೇರಿದಂತೆ ಅನೇಕ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ.


Spread the love

About Laxminews 24x7

Check Also

ಕೆಲಸ ಮುಗಿಸಿ ಬರುವಾಗ ಸಿಡಿಲು ಬಡಿದು ರೈತ ಸಾವು

Spread the love ಗದಗ: ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಗದಗ  ಜಿಲ್ಲೆಯ ರೋಣ  ತಾಲೂಕಿನ ಮೆಣಸಗಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ