Breaking News

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the love

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ ಅಂತ ಸಚಿವ ಶಿವರಾಜ್ ತಂಗಡಗಿ  ತಿಳಿಸಿದ್ದಾರೆ.

ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ವಿಷಯ ಪ್ರಸ್ತಾಪ ಮಾಡಿದರು. ಸರ್ಕಾರ ಕನ್ನಡ ನೆಲ, ಜಲಕ್ಕೆ ಹೋರಾಟ ಮಾಡಿದ ಹೋರಾಟಗಾರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ವಾಟಾಳ್ ನಾಗರಾಜ್  ಸೇರಿ ಕನ್ನಡಪರ ಹೋರಾಟಗಾರಿಗೆ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಕೊಡಬೇಕು. ಕನ್ನಡ ಪರ ಹೋರಾಟ ಮಾಡುವ ಸಂಘ ಸಂಸ್ಥೆಗಳಿಗೆ ನಿವೇಶನ ಕೊಡಬೇಕು ಅಂತ ಮನವಿ ಮಾಡಿದ್ದಾರೆ.

ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಉತ್ತರ ನೀಡಿ, ಕನ್ನಡ ಪರ ಹೋರಾಟ ಮಾಡುವವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡೋ ಕೆಲಸ ಸರ್ಕಾರ ಮಾಡ್ತಿದೆ. ವಾಟಾಳ್ ನಾಗರಾಜ್‌ಗೆ ಖಂಡಿತವಾಗಿ ರಾಜೋತ್ಸವ ಪ್ರಶಸ್ತಿ ಕೊಡಬೇಕು. ಈ ವರ್ಷ ಆಯ್ಕೆ ಸಮಿತಿಯ ಮುಂದೆ ಅವರ ಹೆಸರು ಪ್ರಸ್ತಾವನೆ ಕಳಿಸ್ತೀವಿ. ಕನ್ನಡ ಪರ ಹೋರಾಟಗಾರರ ಮೇಲಿನ ಕೇಸ್ ವಾಸಪ್ ಪಡೆಯೋ ಕೆಲಸ ಆಗ್ತಿದೆ. ಕನ್ನಡ ಪರ ಹೋರಾಟ ಮಾಡೋ ಸಂಘ-ಸಂಸ್ಥೆಗಳಿಗೆ ನಿವೇಶನ ಕೊಡುವ ಬಗ್ಗೆ ಸಿಎಂ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ