Breaking News

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ: ಆಣ್ಣಾಸಾಹೇಬ್ ಜೊಲ್ಲೆ

Spread the love

ಬೆಳಗಾವಿಯಲ್ಲಿ ಶೈಕ್ಷಣಿಕ ಕಾರ್ಯಾಗಾರ

ಭಾರತದಲ್ಲಿ ಜೀವ ವಿಮೆಯ ಬಗ್ಗೆ ಜಾಗೃತಿ ಮೂಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಮತ್ತು ಮುಂಬೈನ ಪಾಲಿಸಿ ಗ್ರೇಸ್ ಇನ್ಶೂರೆನ್ಸ್ ಬ್ರೋಕರ್ಸ್ ಪ್ರೈವೆಟ್ ಲಿಮಿಟೆಡ್’ನ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ಕಾರವಾರ, ಗದಗ ಹಾಗೂ ಹಾವೇರಿ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಬೆಳಗಾವಿಯ ಮಹಾಂತೇಶನಗರದ ಮಹಾಂತ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ್ ಆರ್. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರು ಅವರು ದೇಶ ಮತ್ತು ವಿದೇಶದ ಇನ್ಶೂರೆನ್ಸ್’ಗಳಲ್ಲಿ ಅತ್ಯಂತ ವ್ಯತ್ಯಾಸಗಳಿವೆ. ಪರದೇಶದಲ್ಲಿ ಪ್ರತಿಯೊಬ್ಬರು ಇನ್ಶೂರೆನ್ಸ್’ದಾರರಾಗಿರುತ್ತಾರೆ. ನಮ್ಮ ದೇಶದಲ್ಲಿ ಜೀವ ವಿಮೆ ಮಹತ್ವ ಮತ್ತು ಜಾಗೃತಿಯ ಅತ್ಯಂತ ಆವಶ್ಯಕತೆಯಿದೆ. ಕುಟುಂಬದ ವಾರಸುದಾರರಿಗೆ ಅನುಕೂಲವಾಗಲಿ ಮತ್ತು ಸ್ವತಃ ತಮಗೆ ಅನುಕೂಲವಾಗಲಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಧರೇಪ್ಪ ಆಲಗೂರ, ಡಾ. ಸಂಜಯ್ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಉಮೇಶ್ ಬಾಳಿ, ಬಸಗೌಡ ಪಾಟೀಲ್, ಶಾಹೀನ್ ಅಬ್ಬಾಸ್, ಜೀತೇಂದ್ರಸಿಂಗ್ ಇನ್ನುಳಿದವರು ಉಪಸ್ಥಿತರಿದ್ಧರು. ಹರದೀಪ ಸಾಲ್ವಾನ್ ಅವರು ಪತ್ತಿನ ಸಹಕಾರ ಸಂಘಗಳ ಭದ್ರ ಭವಿಷ್ಯಕ್ಕಾಗಿ ವಿಮಾ ಯೋಜನೆಗಳ ಲಾಭಗಳು ಮತ್ತು ಪ್ರಾಮುಖ್ಯತೆಗಳ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಂತೋಷಕುಮಾರ್, ಸಿಎಂ ಮಾರೇಗೌಡ, ಡಾ.ಬಿ.ಡಿ. ಭೂಕಾಂತ, ಡಾ. ನಾಗೇಂದ್ರ ಡಿ.ಎಲ್. ರವಿ ಕಲಬುರ್ಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಬಜೆಟ್ ನಲ್ಲಿ ಸ್ಪಷ್ಟ ಯೋಜನೆಗಳಿಲ್ಲ- ಡಾ.ಸೋನಾಲಿ ಸರ್ನೋಬತ್

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಮಹಿಳೆಯರು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ