Breaking News

ಬೆಳಗಾವಿ ಮಹಾಪಾಲಿಕೆಯಿಂದ ‘ಆಪರೇಷನ್ ಲೈಸೆನ್ಸ್’: ನಿಯಮ ಉಲ್ಲಂಘಿಸಿದ ಖ್ಯಾತ ಮಳಿಗೆಗಳಿಗೆ ಭಾರಿ ದಂಡ!

Spread the love

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಆದೇಶದ ಬೆನ್ನಲ್ಲೇ ಈಗ ನಗರದಾದ್ಯಂತ ಹೆಲ್ತ್ ಇನ್ಸ್‌ಪೆಕ್ಟರ್‌ಗಳ ತಂಡ ಅಖಾಡಕ್ಕಿಳಿದಿದೆ. ವ್ಯಾಪಾರ ಪರವಾನಗಿ ಪಡೆಯದೆ ವಹಿವಾಟು ನಡೆಸುತ್ತಿರುವ ದೊಡ್ಡ ದೊಡ್ಡ ಮಳಿಗೆಗಳಿಗೆ ಪಾಲಿಕೆ ಅಧಿಕಾರಿಗಳು ಶಾಕ್ ನೀಡುತ್ತಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ನಗರದ ಉತ್ತರ ಮತ್ತು ದಕ್ಷಿಣ ವಲಯದ ಆರೋಗ್ಯ ನಿರೀಕ್ಷಕರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಸಮಾದೇವಿ ಗಲ್ಲಿಯಲ್ಲಿರುವ ಪ್ರಸಿದ್ಧ ‘ಕಲ್ಯಾಣಿ ಸ್ವೀಟ್ ಮಾರ್ಟ್’ ಮೇಲೆ ದಾಳಿ ನಡೆಸಿದ ತಂಡ, ವ್ಯಾಪಾರ ಪರವಾನಗಿ ಇಲ್ಲದೆ ವಹಿವಾಟು ನಡೆಸುತ್ತಿರುವುದನ್ನು ಪತ್ತೆಹಚ್ಚಿದೆ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಗೆ ತಕ್ಷಣವೇ 5,000 ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಕಾರ್ಯಾಚರಣೆಯನ್ನು ಮುಂದುವರಿಸಿದ ಅಧಿಕಾರಿಗಳ ತಂಡವು ಖಡೇ ಬಝಾರ್‌’ನಲ್ಲಿರುವ ‘ಲೆನ್ಸ್‌ಕಾರ್ಟ್’ ಮಳಿಗೆಗೆ ಭೇಟಿ ನೀಡಿತು. ಅಲ್ಲಿಯೂ ಸಹ ಟ್ರೇಡ್ ಲೈಸೆನ್ಸ್ ಇಲ್ಲದೆ ವ್ಯವಹಾರ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ 5,000 ರೂಪಾಯಿ ದಂಡ ವಿಧಿಸಲಾಗಿದೆ. ನಗರದ ಪ್ರತಿಯೊಂದು ಉದ್ದಿಮೆದಾರರು ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ