Breaking News

ಇವರ ಸಾಧನೆ ಸಾಲದ ಹೊರೆ ಅಷ್ಟೇ

Spread the love

ವಿಜಯಪುರ: ರಾಜ್ಯ ಸರ್ಕಾರ 1000 ದಿನಗಳ ಸಂಭ್ರಮ ಆಚರಿಸಿದೆ. ಆದರೆ ಇವರ ಸಾಧನೆ ಕೇವಲ ಸಾಲದ ಹೊರೆ ಅಷ್ಟೇ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, 1000 ದಿನ ರಾಜ್ಯ ಸರ್ಕಾರ ಪೂರೈಸಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಪ್ರತಿನಿತ್ಯ ಗದ್ದುಗೆ ಗುದ್ದಾಟ ನಡೆಯುತ್ತಿದೆ. ಒಂದೆ ಕಡೆ ರಾಜ್ಯ ಸೊರಗಿ ಹೋಗಿದೆ. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಒಂದು ದಿನಕ್ಕೆ 300 ಕೊಟಿ ರೂ. ಸಾಲ ಮಾಡ್ತಿದ್ದಾರೆ. ಇವರ ಸಾಧನೆ ಸಾಲದ ಹೊರೆ ಆಗಿದೆ ಅಷ್ಟೇ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಿಡಿಎಸ್ ಬೆಳ್ಳಿ ಹಬ್ಬ ಆಚರಣೆ ಹಿನ್ನೆಲೆ ಫೆ.27 ರಂದು ವಿಜಯಪುರದಲ್ಲಿ ಜಿಡಿಎಸ್ ಬೃಹತ್ ಸಮಾವೇಶ ಆಯೋಜನೆ ಮಾಡಿದೆ. ವಿಜಯಪುರ ನಗರದ ಸಿಂದಗಿ ನಾಕಾ ಬಳಿ ಸಮಾವೇಶ ನಡೆಯಲಿದೆ. 7 ಜಿಲ್ಲೆಯ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ವಿಜಯಪುರದಲ್ಲಿ ಗೃಹ ಬಳಕೆಯ ಅನಿಲ ಅಭಾವ

Spread the loveವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಕೊರತೆ ಸಮಸ್ಯೆ ಮುಂದುವರೆ ದಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ