Breaking News

ನೆಹರೂ ನಗರದ ಬಸವಣ್ಣ, ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ

Spread the love

ಬೆಳಗಾವಿ: ಮಹಾಶಿವರಾತ್ರಿ ಪ್ರಯುಕ್ತ ನೆಹರೂ ನಗರದಲ್ಲಿರುವ ಬಸವಣ್ಣ, ಮಹಾದೇವ ಮಂದಿರದಲ್ಲಿ ಸೋಮವಾರ ಮಹಾರುದ್ರ ಯಾಗ, ಹೋಮ ಹಾಗೂ ಮಹಾಪ್ರಸಾದ ಜರುಗಿತು.
ಬೆಳಗ್ಗೆ ಗಣೇಶ ಪೂಜೆ, ಮಹಾದೇವನಿಗೆ ಅಭಿಷೇಕ, ಮಹಾರುದ್ರ ಹೋಮಗಳಲ್ಲಿ ನೆಹರೂ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಇತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ದೇವಸ್ಥಾನ ಮಂಡಳಿಯ ಶಿವಾಜಿ ಠಕ್, ವಿಶ್ವನಾಥ ಪಾಟೀಲ, ವಿಜಯ ಪಾಟೀಲ, ದಾದು ಪಾಟೀಲ, ಸಂಜಯ ಸುತಾರ, ದೀಪಕ ಬಿರ್ಜೆ, ಗಂಗಾಧರ ಪಾಟೀಲ, ವಿಶಾಲ ಖಂಡಾಗಳೆ, ಯಶವಂತ ಪಾಟೀಲ, ಸುರೇಶ ಕದಮ, ರವಿ ಭಾತಖಾಂಡೆ, ರೇಷ್ಮಾ ಪಾಟೀಲ ಇತರರಿದ್ದರು.

Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ