Breaking News

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್

Spread the love

ನಟ ದರ್ಶನ್  ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ಅವರು ಜೈಲಿನಲ್ಲಿ ಇರುವುದರಿಂದ ಸಂಭ್ರಮಕ್ಕೆ ಅವಕಾಶ ಇಲ್ಲ. ನೆಚ್ಚಿನ ನಟ ಇಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಎದ್ದು ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ದರ್ಶನ್​​ಗೆ ಅಭಿಮಾನಿಗಳು ಹಾಗೂ ಅವರನ್ನು ಇಷ್ಟಪಡೋ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರು ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆದರು. ಅವರು ಆರಂಭದಲ್ಲಿ ಕೆಲ ತಿಂಗಳು ಜೈಲಿನಲ್ಲಿ ಇದ್ದರು. ಆ ಬಳಿಕ ಜಾಮೀನು ಪಡೆದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರು ತುಂಬಾನೇ ಕಷ್ಟಪಡುತ್ತಿದ್ದಾರೆ.ಈ ಕಷ್ಟ ನೋಡಲು ಅವರ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಈಗ ಅವರು ಜೈಲಿನಲ್ಲೇ ಜನ್ಮದಿನ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ದರ್ಶನ್ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆ ಇದೆ. ಈ ಮಧ್ಯೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ. ದರ್ಶನ್ ಅವರಿಗೆ ಆನೆ ಎಂದರೆ ಇಷ್ಟ. ಹೀಗಾಗಿ, ಕೇಕ್​​ನಲ್ಲಿ ಆನೆಯನ್ನು ಇಡಲಾಗಿದೆ.


Spread the love

About Laxminews 24x7

Check Also

ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ: ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಸಿದ್ದರಾಮಯ್ಯ ಗರಂ

Spread the loveಬೆಂಗಳೂರು ಆರೋಗ್ಯ ಇಲಾಖೆ ಅಧಿಕಾರಿಯನ್ನ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡ್ಬೇಕೆಂಬ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾದ ಪತ್ರ ಸದ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ